ಗುಜರಾತ್‌ನಲ್ಲಿ ಟ್ರಾಫಿಕ್‌ ಪೊಲೀಸರಿಗೆ ಎಸಿ ಹೆಲ್ಮೆಟ್‌

| Published : Apr 19 2024, 01:03 AM IST / Updated: Apr 19 2024, 06:10 AM IST

ಗುಜರಾತ್‌ನಲ್ಲಿ ಟ್ರಾಫಿಕ್‌ ಪೊಲೀಸರಿಗೆ ಎಸಿ ಹೆಲ್ಮೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲಿನ ತಾಪದಲ್ಲಿ ಕೆಲಸ ಮಾಡಬೇಕಿರುವ ಸಂಚಾರಿ ಪೊಲೀಸರಿಗೆ ಗುಜರಾತ್‌ ಪೊಲೀಸ್‌ ಹೊಸ ಉಪಕ್ರಮವನ್ನು ಜಾರಿಗೊಳಿಸಿದ್ದು, ತನ್ನ ಸಿಬ್ಬಂದಿಗೆ ಹವಾನಿಯಂತ್ರಿತ ಹೆಲ್ಮೆಟ್‌ಗಳನ್ನು ವಿತರಿಸಿದೆ.

ವಡೋದರಾ: ಬಿಸಿಲಿನ ತಾಪದಲ್ಲಿ ಕೆಲಸ ಮಾಡಬೇಕಿರುವ ಸಂಚಾರಿ ಪೊಲೀಸರಿಗೆ ಗುಜರಾತ್‌ ಪೊಲೀಸ್‌ ಹೊಸ ಉಪಕ್ರಮವನ್ನು ಜಾರಿಗೊಳಿಸಿದ್ದು, ತನ್ನ ಸಿಬ್ಬಂದಿಗೆ ಹವಾನಿಯಂತ್ರಿತ ಹೆಲ್ಮೆಟ್‌ಗಳನ್ನು ವಿತರಿಸಿದೆ. ಇದನ್ನು ಧರಿಸಿರುವ ಪೊಲೀಸರು ತಮ್ಮ ತಲೆಯನ್ನು ತಂಪಾಗಿರಿಸಿಕೊಂಡು ಕೆಲಸ ಮಾಡಬಹುದಾಗಿದೆ.

ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಗರದ ಪ್ರಮುಖ ಆರು ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ನೀಡಲಾಗಿದೆ. ಅವರು ಕೆಲಸದಲ್ಲಿ ಹೆಚ್ಚು ದಕ್ಷತೆ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಹೆಲ್ಮೆಟ್‌ ವಿತರಣೆಯನ್ನು ನಗರದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಗುಜರಾತ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆಲ್ಮೆಟ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಒಂದು ಬಾರಿ ಪೂರ್ತಿ ಚಾರ್ಜ್‌ ಮಾಡಿದಲ್ಲಿ 8 ಗಂಟೆಗಳ ಕಾಲ ತಂಪಾದ ಗಾಳಿ ಒದಗಿಸುತ್ತದೆ. ಈ ರೀತಿ ಹವಾನಿಯಂತ್ರಿತ ಹೆಲ್ಮೆಟ್‌ ನೀಡುವಿಕೆಯನ್ನು ಇದಕ್ಕೂ ಮೊದಲು ಉತ್ತರಪ್ರದೇಶದ ಕಾನ್ಪುರದ ಸಂಚಾರ ಪೊಲೀಸರಿಗೂ ಪರಿಚಯಿಸಲಾಗಿತ್ತು.