ಸಾರಾಂಶ
ಭಾರತೀಯ ರೈಲ್ವೆಯ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳು ಶೀಘ್ರವಾಗಿ ದೆಹಲಿಯಿಂದ ಉದ್ಘಾಟನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಭಾರತೀಯ ರೈಲ್ವೆಯ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳು ಶೀಘ್ರವಾಗಿ ದೆಹಲಿಯಿಂದ ಉದ್ಘಾಟನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಉದ್ಘಾಟನಾ ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುತ್ತವೆ ಎಂಬ ಮಾತುಗಳಿತ್ತು. ಆದರೆ ಉದ್ಘಾಟನಾ ರೈಲು ದೆಹಲಿಯಿಂದ ಪಟನಾ, ಅಹಮದಾಬಾದ್ ಅಥವಾ ಭೋಪಾಲ್‌ಗೆ ಇರಲಿದೆ ಎನ್ನಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳು 1 ಸಾವಿರ ಕಿ.ಮೀ. ದೂರದರೆಗೆ ಸಂಚರಿಸುವ ಸಾಧ್ಯತೆ ಇದೆ.
ರೈಲು ಹೇಗಿರುತ್ತವೆ?:
ಈ ರೈಲುಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 3 ಟೈರ್, 2 ಟೈರ್ ಮತ್ತು ಫಸ್ಟ್ ಕ್ಲಾಸ್ ಏಸಿ ಕೋಚ್‌ಗಳು ಇರಲಿವೆ. ವಿಶೇಷವೆಂದರೆ, ಫಸ್ಟ್ ಕ್ಲಾಸ್ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯು ಇರಲಿದೆ. ಇವುಗಳು 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಈ ವರ್ಷಾಂತ್ಯಕ್ಕೆ 10 ಸೆಟ್ ರೈಲುಗಳು ತಯಾರಾಗಲಿವೆ.