2025-26ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟ : ವರುಣ್‌, ಅಭಿಷೇಕ್‌ ಶರ್ಮಾ, ನಿತೀಶ್‌ಗೆ ಬಿಸಿಸಿಐ ಗುತ್ತಿಗೆ?

| N/A | Published : Apr 02 2025, 01:04 AM IST / Updated: Apr 02 2025, 04:29 AM IST

2025-26ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟ : ವರುಣ್‌, ಅಭಿಷೇಕ್‌ ಶರ್ಮಾ, ನಿತೀಶ್‌ಗೆ ಬಿಸಿಸಿಐ ಗುತ್ತಿಗೆ?
Share this Article
  • FB
  • TW
  • Linkdin
  • Email

ಸಾರಾಂಶ

2025-26ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟಗೊಳ್ಳಲಿದ್ದು, ಯಾವ್ಯಾವ ಆಟಗಾರರಿಗೆ ಯಾವ ದರ್ಜೆಯ ಗುತ್ತಿಗೆ ನೀಡಬೇಕು ಎನ್ನುವುದರ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್‌ ಸಾಯ್ಕಿಯಾ ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ

ನವದೆಹಲಿ: 2025-26ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟಗೊಳ್ಳಲಿದ್ದು, ಯಾವ್ಯಾವ ಆಟಗಾರರಿಗೆ ಯಾವ ದರ್ಜೆಯ ಗುತ್ತಿಗೆ ನೀಡಬೇಕು ಎನ್ನುವುದರ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್‌ ಸಾಯ್ಕಿಯಾ ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಮೂಲಗಳ ಪ್ರಕಾರ, ಗುತ್ತಿಗೆ ಪಟ್ಟಿಯಲ್ಲಿ ಮೊದಲ ಬಾರಿಗೆ ವರುಣ್‌ ಚಕ್ರವರ್ತಿ, ಅಭಿಷೇಕ್‌ ಶರ್ಮಾ, ನಿತೀಶ್‌ ಕುಮಾರ್‌ ರೆಡ್ಡಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ವರ್ಷವೂ ಇಶಾನ್‌ ಕಿಶನ್‌ರನ್ನು ಬಿಸಿಸಿಐ ಕಡೆಗಣಿಸಿದ್ದು, ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಟಿ20: ಸೂರ್ಯಕುಮಾರ್‌ 8000 ರನ್‌ ಮೈಲುಗಲ್ಲು! 

ಮುಂಬೈ: ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ 8000 ರನ್‌ ಪೂರೈಸಿದ್ದಾರೆ. ಸೋಮವಾರ ವಾಂಖೇಡೆ ಕ್ರೀಡಾಂಗಣದಲ್ಲಿ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆಗೈದರು. 8000 ರನ್‌ ಮೈಲುಗಲ್ಲು ತಲುಪಲು ಅತಿ ಕಡಿಮೆ ಎಸೆತಗಳನ್ನು ಎದುರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯ 2ನೇ ಸ್ಥಾನ ಪಡೆದಿದ್ದಾರೆ. 5256 ಎಸೆತಗಳಲ್ಲಿ 8000 ರನ್‌ ದಾಖಲಿಸಿದ್ದಾರೆ. 4749 ಎಸೆತಗಳಲ್ಲಿ ಈ ಸಾಧನೆ ಮಾಡಿರುವ ಆ್ಯಂಡ್ರೆ ರಸೆಲ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.