ಸಾರಾಂಶ
ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಹೇಳಿದೆ.
ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಹೇಳಿದೆ.
ಈ ಕುರಿತು ಮಾತನಾಡಿದ ಪರಿಷದ್‌ನ ಕಾರ್ಯನಿರ್ವಹಕ ಅಧ್ಯಕ್ಷ ಅಲೋಕ್ ಕುಮಾರ್,‘ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು 10 ಕೋಟಿ ಕುಟುಂಬಗಳಿಗೆ ವಿಶ್ವ ಹಿಂದು ಪರಿಷದ್‌ನ ಕಾರ್ಯಕರ್ತರು ಮನೆಗೆ ತೆರಳಿ ಆಹ್ವಾನ ನೀಡಲಿದ್ದಾರೆ. ಆಹ್ವಾನ ಪತ್ರಿಕೆಯೊಂದಿಗೆ ರಾಮನ ಚಿತ್ರವನ್ನು ನೀಡಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಕಾಣಿಕೆ ಸಂಗ್ರಹ ಮಾಡುವುದಿಲ್ಲ. ವಿಶೇಷವಾಗಿ ರಾಮಜನ್ಮಭೂಮಿ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಅವರಿಗೆ ಜ.27ರಿಂದ ಫೆ.22ರವರೆಗೆ ಗುಂಪುಗಳಾಗಿ ಮಾಡಿ ಸ್ವಾಮಿ ದರ್ಶನ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ ದೇಶದ ಎಲ್ಲರೂ ಬರಲಾಗದ ಕಾರಣ ಜನರು ತಮ್ಮ ಸಮೀಪದ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಮನೆಗಳಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಿ. ನಂತರದ ದಿನದಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.