2 ದಿನದಲ್ಲಿ 2ನೇ ಬಿಜೆಪಿ ಸಂಸದರು ಕಾಂಗ್ರೆಸ್‌ಗೆ

| Published : Mar 12 2024, 02:05 AM IST / Updated: Mar 12 2024, 07:51 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಗೆ ಟಿಕೆಟ್ ನೀಡಿಲ್ಲ ಎಂದು ಭ್ರಮನಿರಸನಗೊಂಡ ರಾಜಸ್ಥಾನದ ಚುರು ಜಿಲ್ಲೆಯ ಸಂಸದ ರಾಹುಲ್‌ ಕಸ್ವಾನ್‌ ಸೋಮವಾರ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ನವದೆಹಲಿ/ಜೈಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಗೆ ಟಿಕೆಟ್ ನೀಡಿಲ್ಲ ಎಂದು ಭ್ರಮನಿರಸನಗೊಂಡ ರಾಜಸ್ಥಾನದ ಚುರು ಜಿಲ್ಲೆಯ ಸಂಸದ ರಾಹುಲ್‌ ಕಸ್ವಾನ್‌ ಸೋಮವಾರ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಇದರೊಂದಿಗೆ 2 ದಿನದಲ್ಲಿ 2 ಬಿಜೆಪಿ ಸಂಸದರು ಕಾಂಗ್ರೆಸ್‌ ಸೇರಿದಂತಾಗಿದೆ. ಭಾನುವಾರ ಹರ್ಯಾಣದ ಹಿಸಾರ್‌ ಬಿಜೆಪಿ ಸಂಸದ ಬೃಜೇಶ್‌ ಸಿಂಗ್‌ ಕಾಂಗ್ರೆಸ್ ಸೇರಿದ್ದರು.

ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಸ್ವಾನ್‌ ಕಾಂಗ್ರೆಸ್‌ ಸೇರಿದ್ದಾರೆ. ಈ ವೇಳೆ ಅವರು ಬಿಜೆಪಿಯಲ್ಲಿ ಯಾರೂ ತಮ್ಮ ಮಾತು ಆಲಿಸಲ್ಲ ಎಂದು ಕಿಡಿಕಾರಿದ್ದಾರೆ.

ಕಸ್ವಾನ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, “ಊಳಿಗಮಾನ್ಯ ಜನರ ವಿರುದ್ಧ ಹೋರಾಡಿದ ಮತ್ತು ರೈತರ ಸಮಸ್ಯೆಯನ್ನು ಬೆಂಬಲಿಸಿದ ರಾಹುಲ್ ಕಸ್ವಾನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನನಗೆ ಸಂತೋಷ ತಂದಿದೆ’ ಎಂದರು.