ಇಂದು ಲೋಕಸಭೆಯಲ್ಲಿ ಜಂಟಿ ಸಂಸದೀಯ ಸಮಿತಿಯಿಂದ ಪರಿಷ್ಕರಣೆಗೆ ಒಳಪಟ್ಟ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

| N/A | Published : Feb 02 2025, 11:45 PM IST / Updated: Feb 03 2025, 04:59 AM IST

ಸಾರಾಂಶ

  ಜಂಟಿ ಸಂಸದೀಯ ಸಮಿತಿಯಿಂದ ಪರಿಷ್ಕರಣೆಗೆ ಒಳಪಟ್ಟಿರುವ ವಕ್ಫ್‌ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ನವದೆಹಲಿ: ಜಂಟಿ ಸಂಸದೀಯ ಸಮಿತಿಯಿಂದ ಪರಿಷ್ಕರಣೆಗೆ ಒಳಪಟ್ಟಿರುವ ವಕ್ಫ್‌ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮತ್ತು ಸದಸ್ಯ ಸಂಜಯ್ ಜೈಸ್ವಾಲ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವರದಿಯನ್ನು ಮಂಡಿಸಲಿದ್ದಾರೆ. ಮಸೂದೆಯನ್ನು ಇದೇ ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ತಿದ್ದುಪಡಿ ಏಕೆ?: ದಶಕಗಳ ಹಿಂದಿನ ಮಸೂದೆ ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡಬೇಕಿದೆ ಎಂಬ ಬೇಡಿಕೆ, ವಕ್ಫ್‌ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ, ವಕ್ಫ್‌ ಆಸ್ತಿ ರಕ್ಷಣೆ, ಮುಸ್ಲಿಮರಲ್ಲಿ ಎಲ್ಲಾ ಸಮುದಾಯಗಳಿಗೂ ವಕ್ಫ್‌ ಮಂಡಳಿಯಲ್ಲಿ ಅವಕಾಶ ಮೊದಲಾದ ಉದ್ದೇಶಗಳಿಂದ ಕೇಂದ್ರ ಸರ್ಕಾರ ವಕ್ಫ್‌ ಮಂಡಳಿಗೆ ತಿದ್ದುಪಡಿ ತಂದಿತ್ತು. ಆದರೆ ಅದರಲ್ಲಿನ ಕೆಲವೊಂದು ಅಂಶಗಳನ್ನು ಇನ್ನಷ್ಟು ಆಳ ಅಧ್ಯಯನಕ್ಕೆ ಒಳಪಡಿಸಬೇಕಿದೆ ಮತ್ತು ಸಮಾಜದ ಎಲ್ಲಾ ವಲಯಗಳಿಂದಲೂ ಆ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕಿದೆ ಎಂಬ ವಿಪಕ್ಷಗಳ ಬೇಡಿಕೆ ಅನ್ವಯ ಅದನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಒಳಪಡಿಸಿತ್ತು

ಸಮಿತಿಯ 1 ಕೋಟಿಗೂ ಹೆಚ್ಚು ಅಭಿಪ್ರಾಯಗಳ ಪರಿಶೀಲಿಸಿ ಅಂತಿಮವಾಗಿ 14 ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಅಂಗೀಕರಿಸಿ ಇತ್ತೀಚೆಗೆ ಲೋಕಸಭೆಯ ಸ್ಪೀಕರ್‌ಗೆ ವಹಿಸಿತ್ತು.