ಸಾರಾಂಶ
ವಿಕೆ ಸಕ್ಸೇನಾ ಅವರು ವಿವಾದಿತ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಕೇಂದ್ರೀಯ ವಿವಿ ಮಾಜಿ ಪ್ರಾಧ್ಯಾಪಕಕಾಶ್ಮೀರದ ಕೇಂದ್ರೀಯ ವಿವಿ ವಿರುದ್ಧ ಕಠಿಣ ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿರುವುದು ವಿವಾದಕ್ಕೀಡಾಗಿದೆ.
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ವಿವಾದಿತ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಕೇಂದ್ರೀಯ ವಿವಿ ಮಾಜಿ ಪ್ರಾಧ್ಯಾಪಕ ಶೇಖ್ ಹುಸೇನ್ ವಿರುದ್ಧ ಕಠಿಣ ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿರುವುದು ವಿವಾದಕ್ಕೀಡಾಗಿದೆ.
ದಿಲ್ಲಿ ಉಪರಾಜ್ಯಪಾಲರ ಕ್ರಮವನ್ನು ಪ್ರತಿಪಕ್ಷಗಳು ‘ಇದು ಫ್ಯಾಸಿಸ್ಟ್ ನಿರ್ಧಾರ. ಈ ನಿರ್ಧಾರಕ್ಕೆ ಬಿಜೆಪಿ ಕುಮ್ಮಕ್ಕಿದೆ’ ಎಂದು ತೀವ್ರವಾಗಿ ಖಂಡಿಸಿವೆ. 2010ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ಬಗ್ಗೆ ಭಾಷಣ ಮಾಡಿದ ಆರೋಪ ಮೇಲೆ ಈ ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.
ಆದರೆ, ಈ ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನಲೆ ಅವರಿಬ್ಬರ ವಿರುದ್ಧ ಹೆಚ್ಚಾಗಿ ಸಮಾಜಘಾತಕರು ಹಾಗೂ ಉಗ್ರರ ವಿರುದ್ಧದ ಹಾಕುವ ಯುಎಪಿಎ ಕೇಸಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.ಇದನ್ನು ಸಿಪಿಎಂ ತೀವ್ರವಾಗಿ ಖಂಡಿಸಿ, ‘ಫ್ಯಾಸಿಸ್ಟ್ ಮನೋಭಾವದ ತೀರ್ಮಾನ. ಕೋರ್ಟುಗಳಿಗೆ ಬೇಸಿಗೆ ರಜೆ ಇರುವಾಗ ಸ್ಥಿತಿ ದುರ್ಭಳಕೆ ಮಾಡಿಕೊಂಡು ಈ ಕ್ರಮ ಜರುಗಿಸಲಾಗಿದೆ.
14 ವರ್ಷ ಸುಮ್ಮನಿದ್ದು ಈಗ ಏಕೆ ಕ್ರಮ?’ ಎಂದಿದೆ.ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಟ್ವೀಟ್ ಮಾಡಿ, ‘ವಾಕ್ ಸ್ವಾತಂತ್ರ್ಯದ ಮೇಲೆ ಇದು ಹಲ್ಲೆ’ ಎಂದಿದ್ದಾರೆ. ಟಿಎಂಸಿ ಸಂಸದೆ ಮಹುಮಾ ಮೊಯಿತ್ರಾ ಕೂಡ ಅರುಂಧತಿಯನ್ನು ಬೆಂಬಲಿಸಿದ್ದಾರೆ.ಆದರೆ ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡು, ‘ದೇಶ ವಿಭಜನೆಯ ಮಾತು ಆಡಿದವರಿಗೆ ಏಕೆ ವಿಪಕ್ಷಗಳ ಬೆಂಬಲ?’ ಎಂದು ಪ್ರಶ್ನಿಸಿದ್ದಾರೆ.