ಸಾರಾಂಶ
ವಯನಾಡು: ವಯನಾಡು ಉಪಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸೋಮವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಪ್ರಿಯಾಂಕಾ ‘ ಕೇಂದ್ರದಲ್ಲಿರುವ ಬಿಜೆಪಿ ಸಮುದಾಯಗಳ ನಡುವೆ ಭಯ, ಕೋಪ, ಅಗೌರವವನ್ನು ಬಿತ್ತುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ನೀವು ನೋಡಿದ್ದೀರಿ.
ಮಣಿಪುರದ ಹಿಂಸಾಚಾರ ನೋಡಿದ್ದೀರಿ. ನೀವು ಯೋಜಿತ ರೀತಿಯಲ್ಲಿ ಮತ್ತೇ ಮತ್ತೇ ಕೋಪ, ದ್ವೇಷವನ್ನು ನೋಡುತ್ತಿದ್ದೀರಿ. ಇಂದು ನಾವು ದೊಡ್ಡ ಯುದ್ಧವನ್ನು ನಡೆಸುತ್ತಿದ್ದೇವೆ. ನಾವೆಲ್ಲರೂ ದೇಶವನ್ನು ಕಟ್ಟಿರುವ ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇವೆ. ಸಂವಿಧಾನದ ಮೌಲ್ಯಗಳಿಗೆ, ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನೀವೆಲ್ಲರೂ ಯೋಧರಾಗಿದ್ದೀರಿ’ ಎಂದರು.\
ಸಿಎಂ ಶಿಂಧೆ, ಡಿಸಿಎಂ ಅಜಿತ್ ನಾಮಪತ್ರ ಸಲ್ಲಿಕೆ
ಥಾಣೆ: ನ.20ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಿಎಂ ಏಕನಾಥ ಶಿಂಧೆ ಕೊಪ್ರಿ-ಪಚಪಾಖಡಿ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು ಶಿಂಧೆ ತಮ್ಮ ರಾಜಕೀಯ ಗುರು ಅನಂದ ಧಿಘೆ ಅವರಿಗೆ ಗೌರವ ಅರ್ಪಿಸಿದರು. ವಿಪರ್ಯಾಸವೆಂದರೆ, ಚುನಾವಣೆಯಲ್ಲಿ ಇವರು ಆನಂದ್ ದಿಘೆ ಸಂಬಂಧಿ ಕೇದಾರ್ ದಿಘೆ ಅವರ ವಿರುದ್ಧ ಸೆಣೆಸಲಿದ್ದಾರೆ. ಅತ್ತ ಎನ್‌ಸಿಪಿ ಮುಖ್ಯಸ್ಥ ಡಿಸಿಎಂ ಅಜಿತ್ ಪವಾರ್ ಕೂಡ ಬಾರಾಮತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.