ಸಾರಾಂಶ
2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಯನಾಡ್ ಹಾಗೂ ರಾಯ್‌ಬರೇಲಿಯ ಪೈಕಿ ಯಾವ ಕ್ಷೇತ್ರ ತೊರೆಯಲಿದ್ದಾರೆ ಎಂಬುದನ್ನು ಸೋಮವಾರ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ತಿರುವನಂತಪುರಂ: 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಯನಾಡ್ ಹಾಗೂ ರಾಯ್‌ಬರೇಲಿಯ ಪೈಕಿ ಯಾವ ಕ್ಷೇತ್ರ ತೊರೆಯಲಿದ್ದಾರೆ ಎಂಬುದನ್ನು ಸೋಮವಾರ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಕ್ಷೇತ್ರ ತೊರೆಯಲು ಅಂತಿಮ ಗಡುವು ಸೋಮವಾರವೇ (ಜೂ.17) ಆಗಿದ್ದು, ಅಂದು ಸಂಜೆಯೊಳಗೆ ರಾಹುಲ್ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ತಮ್ಮ ರಾಜೀನಾಮೆ ಸಲ್ಲಿಸಬೇಕಿದೆ. ಇತ್ತೀಚೆಗೆ ರಾಯ್‌ಬರೇಲಿಯಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ತಾವು ಯಾವ ಕ್ಷೇತ್ರ ತೊರೆಯಬೇಕೆಂಬ ಕುರಿತು ಗೊಂದಲದಲ್ಲಿರುವಾಗಿ ತಿಳಿಸಿದ್ದರು.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ರಾಯ್‌ಬರೇಲಿಯನ್ನು ತೊರೆದು ತಮ್ಮ ಸೋದರಿ ಪ್ರಿಯಾಂಕಾರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.