ಸಾರಾಂಶ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮನ್ನು ಸೋಲಿಸಲು ಬಿಜೆಪಿ, ಎಡಪಕ್ಷಗಳು ಹಾಗೂ ಕಾಂಗ್ರೆಸ್ ಒಂದಾಗಿವೆ ಎಂದು ಕಿಡಿಕಾರಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಪಕ್ಷಗಳಾದ ಬಿಜೆಪಿ, ಎಡರಂಗ ಹಾಗೂ ಕಾಂಗ್ರೆಸ್ ವಿರುದ್ಧ ಕಟುಟೀಕೆ ಮಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನ್ನನ್ನು ಸೋಲಿಲು ‘ರಾಮ್ (ಬಿಜೆಪಿ), ವಾಂ (ಎಡರಂಗ) ಹಾಗೂ ಶ್ಯಾಮ್ (ಕಾಂಗ್ರೆಸ್)’ ಕೈಜೋಡಿಸಿವೆ ಎಂದು ಕಿಡಿಕಾರಿದ್ದಾರೆ.
ಸಂದೇಶ್‌ಖಾಲಿ ಘಟನೆ ಬಗ್ಗೆ ಮಾತನಾಡಿದ ಅವರು,‘ರಾಜ್ಯದಲ್ಲಿ ಬಿಜೆಪಿ ಪ್ರತಿಬಾರಿಯೂ ಶಾಂತಿ ಕದಡಲು ಯತ್ನಿಸುತ್ತಿದೆ.
ಮೊದಲಿಗೆ ಇ.ಡಿಯಿಂದ ಹಲ್ಲೆ, ಬಳಿಕ ಸಂದೇಶ್‌ಖಾಲಿಯಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ.
ಬಂಗಾಳದಲ್ಲಿ ನನ್ನ ವಿರುದ್ಧ ‘ರಾಮ್, ವಾಂ ಹಾಗೂ ಶ್ಯಾಮ್ ’ ಒಟ್ಟಾಗಿ ಸೋಲಿಸಲು ಕೈಜೋಡಿಸಿವೆ. ಕೇಂದ್ರದ ಬಿಜೆಪಿ ಸರ್ಕಾರ ಬಂಗಾಳಿಗಳ ವಿರೋಧಿ ಎಂದು ಟೀಕಿಸಿದರು.