ಸಾರಾಂಶ
1991ರಲ್ಲಿ ರತನ್ ಟಾಟಾ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾ ಕಂಪನಿ ಅದರ ಆದಾಯ ಕೇವಲ 33000 ಕೋಟಿ ರು. ಆಸುಪಾಸಿನಲ್ಲಿತ್ತು. ಆದರೆ 21 ವರ್ಷಗಳ ಬಳಿಕ ಅವರು ಅಧಿಕಾರದಿಂದ ಕೆಳಗೆ ಇಳಿದ ವೇಳೆ ಕಂಪನಿಯ ಆದಾಯ ಭರ್ಜರಿ 8.50 ಲಕ್ಷ ಕೋಟಿ ರು.ಗೆ ತಲುಪಿತ್ತು.

ಇದಕ್ಕೆ ರತನ್ ಟಾಟಾ ಕೈಗೊಂಡ ಕ್ರಾಂತಿಕಾರಿ ಕ್ರಮಗಳೇ ಕಾರಣ. ಕೇವಲ ಸಾಂಪ್ರದಾಯಿಕ ಉದ್ಯಮಕ್ಕೆ ಸೀಮಿತವಾಗದೇ ಕಂಪನಿಯನ್ನು ಹೊಸ ಹೊಸ ದಿಕ್ಕಿನಲ್ಲಿ ಕೊಂಡೊಯ್ದ ರತನ್ ಟಾಟಾ, ವಿದೇಶಿ ಕಂಪನಿಗಳನ್ನೂ ಖರೀದಿಸುವ ಮೂಲಕ ಟಾಟಾ ಸಾಮ್ರಾಜ್ಯವನ್ನು 150 ದೇಶಗಳ ಗಡಿ ದಾಟುವಂತೆ ಮಾಡಿದರು.ನಷ್ಟದಲ್ಲಿದ್ದ ಕಾಸ್ಮೆಟಿಕ್, ಫಾರ್ಮಾ, ಸಿಮೆಂಟ್, ಟೆಕ್ಸ್‌ಟೈಲ್ ಕಂಪನಿಗಳನ್ನು ರತನ್ ಮಾರಾಟ ಮಾಡಿದರು. ಎಲ್ಲಾ ವಲಯಗಳನ್ನು ಮುಂಬೈನ ಕೇಂದ್ರ ಕಚೇರಿಯಿಂದಲೇ ನಿಯಂತ್ರಣ ಮಾಡಿದರು. ಹೊಸ ಹೊಸ ವಲಯಕ್ಕೆ ವಿಸ್ತರಿಸಿದರು. ಉದಾಹರಣಗೆ ಸಾಫ್ಟ್‌ವೇರ್, ಹಣಕಾಸು, ರಿಟೇಲ್, ವಿಮಾನಯಾನ, ಕಾರು, ವಿಮೆ, ದೂರಸಂಪರ್ಕ ವಲಯದಲ್ಲಿನ ಪ್ರವೇಶ ಕಂಪನಿಯ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿತು. ಜೊತೆಗೆ ಟಾಟಾ ಬ್ರ್ಯಾಂಡ್ ನೇಮ್ ಬಳಸಿದ್ದಕ್ಕೆ ಸಂಸ್ಥೆಯ ಇತರೆ ಕಂಪನಿಗಳಿಂದ ರಾಯಲ್ಟಿ ಸಂಗ್ರಹ ಮಾಡಲು ಆರಂಭಿಸಿದರು. ಜೊತೆಗೆ ಲ್ಯಾಂಡ್ ರೋವರ್- ಜಾಗ್ವಾರ್, ಕೋರಸ್, ಟೆಟ್ಲಿಯಂಥ ವಿದೇಶಿ ಕಂಪನಿಗಳ ಖರೀದಿ ಕೂಡಾ ಕಂಪನಿಯ ಆದಾಯವನ್ನು ಹೆಚ್ಚಿಸಿತು.
ಇದೆಲ್ಲದ ಪರಿಣಾಮ ಇದೀಗ ಟಾಟಾ ಸಮೂಹದ ಆದಾಯ 14 ಲಕ್ಷ ಕೋಟಿ ರು. ದಾಟಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))