ಹಣ ಇರುವ ಭಾರತಕ್ಕೆ ನಮ್ಮ 180 ಕೋಟಿ ರು. ಏಕೆ ಬೇಕು? : ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

| N/A | Published : Feb 20 2025, 12:45 AM IST / Updated: Feb 20 2025, 05:52 AM IST

DONALD TRUMP
ಹಣ ಇರುವ ಭಾರತಕ್ಕೆ ನಮ್ಮ 180 ಕೋಟಿ ರು. ಏಕೆ ಬೇಕು? : ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗೆ ಉತ್ತೇಜನ ನೀಡಲು ಅಮೆರಿಕ ನೀಡುತ್ತಿದ್ದ 180 ಕೋಟಿ ರು. ಅನುದಾನವನ್ನು ನಿಲ್ಲಿಸಿದ ತಮ್ಮ ಸರ್ಕಾರದ ಕ್ರಮವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.

ವಾಷಿಂಗ್ಟನ್: ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗೆ ಉತ್ತೇಜನ ನೀಡಲು ಅಮೆರಿಕ ನೀಡುತ್ತಿದ್ದ 180 ಕೋಟಿ ರು. ಅನುದಾನವನ್ನು ನಿಲ್ಲಿಸಿದ ತಮ್ಮ ಸರ್ಕಾರದ ಕ್ರಮವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಬಳಿಯೇ ಸಾಕಷ್ಟು ಹಣವಿದೆ. ಅಮೆರಿಕದ ವಸ್ತುಗಳ ಮೇಲೆ ಅತಿ ಹೆಚ್ಚು ತೆರಿಗೆ ಹಾಕುವ ದೇಶ ಭಾರತ. ಆದರೂ ಭಾರತ ಹಾಗೂ ಅದರ ಪ್ರಧಾನಿ ಬಗ್ಗೆ ಗೌರವವಿದೆ. ಆದರೆ ಮತದಾರರನ್ನು ಉತ್ತೇಜಿಸಲು ನಮ್ಮ ತೆರಿಗೆದಾರರ 180 ಕೋಟಿ ರು. ಹಣ ನೀಡುವುದು ಸರಿಯೇ? ಅಮೆರಿಕದಲ್ಲಿನ ಮತದಾರರನ್ನು ಉತ್ತೇಜಿಸಲು ಏನು ಕ್ರಮ ಜರುಗಿಸಿದ್ದೇವೆ?’ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಟ್ರಂಪ್‌ ಸರ್ಕಾರ ಭಾರತಕ್ಕೆ ಹಿಂದಿನ ಜೋ ಬೈಡೆನ್‌ ಸರ್ಕಾರ ನೀಡುತ್ತಿದ್ದ ಈ ಅನುದಾನ ನಿಲ್ಲಿಸಿದ್ದರು.

ಸುನಿತಾ ವಾಪಸಾತಿಗೆ ಬೈಡೆನ್‌ ಅಡ್ಡಿ: ಟ್ರಂಪ್‌, ಮಸ್ಕ್

ವಾಷಿಂಗ್ಟನ್‌: ಅಮೆರಿಕದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತಾಂತ್ರಿಕ ಕಾರಣಗಳಿಂದ ಸಿಲುಕಿ, ಭೂಮಿಗೆ ಮರಳಲು ವಿಳಂಬ ಆಗಿರುವ ಬಗ್ಗೆ ಮಾಜಿ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಆಪ್ತ ಸಲಹೆಗಾರ ಎಲಾನ್‌ ಮಸ್ಕ್‌ ಕಿಡಿಕಾರಿದ್ದಾರೆ.‘ರಾಜಕೀಯ ಉದ್ದೇಶದಿಂದ ಸುನಿತಾ ಹಾಗೂ ವಿಲ್ಮೋರ್ ಅವರನ್ನು ಬೈಡೆನ್‌ ವಾಪಸು ಕರೆತರಲಿಲ್ಲ. ಆದರೆ ನಾವು ಇನ್ನು 1-2 ತಿಂಗಳಲ್ಲಿ ಕರೆತರುತ್ತೇವೆ’ ಎಂದು ಮಸ್ಕ್‌ ಅವರು ಟ್ರಂಪ್‌ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ದನಿಗೂಡಿಸಿದ ಟ್ರಂಪ್‌, ‘ಸುನಿತಾ ಅವರನ್ನು ವಾಪಸ್‌ ಕರೆತರಲು ಯತ್ನಿಸಿದ ಮಸ್ಕ್‌ ಅವರ ಸ್ಪೇಸ್ ಎಕ್ಸ್ ಅಂತರಿಕ್ಷ ಕಂಪನಿಗೆ ಬೈಡೆನ್‌ ಸರ್ಕಾರ ಅನುಮತಿ ನೀಡಿರಲಿಲ್ಲ’ ಎಂದಿದ್ದಾರೆ.