‘ಸಿಇಸಿ ಜ್ಞಾನೇಶ್ ಕುಮಾರ್‌ ಪ್ರಧಾನಿ ಮೋದಿಯವರಿಗೆ ಏನು ಕೊಡುತ್ತಾರೆ? ಏಕೆ ಅವರ ಪರ ಅಷ್ಟು ಕಾಳಜಿ? ಒಂದು ವೇಳೆ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುತ್ತಿಲ್ಲ ಎಂದಾದರೆ, ಮೋದಿಯವರು ಜ್ಞಾನೇಶ್‌ಗೆ ಇಷ್ಟೊಂದು ಭದ್ರತೆಯನ್ನು ಏಕೆ ಒದಗಿಸುತ್ತಿದ್ದಾರೆ?’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಗುರುವಾರ ಪ್ರಶ್ನಿಸಿದ್ದಾರೆ.

ನವದೆಹಲಿ: ‘ಸಿಇಸಿ ಜ್ಞಾನೇಶ್ ಕುಮಾರ್‌ ಪ್ರಧಾನಿ ಮೋದಿಯವರಿಗೆ ಏನು ಕೊಡುತ್ತಾರೆ? ಏಕೆ ಅವರ ಪರ ಅಷ್ಟು ಕಾಳಜಿ? ಒಂದು ವೇಳೆ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುತ್ತಿಲ್ಲ ಎಂದಾದರೆ, ಮೋದಿಯವರು ಜ್ಞಾನೇಶ್‌ಗೆ ಇಷ್ಟೊಂದು ಭದ್ರತೆಯನ್ನು ಏಕೆ ಒದಗಿಸುತ್ತಿದ್ದಾರೆ?’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಗುರುವಾರ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತ್ರಿವರ್ಣ ಧ್ವಜ ಹಾರಿಸುವುದನ್ನು ಸರ್ಕಾರ ಕಾನೂನು ಉಲ್ಲಂಘನೆ ಎಂದು ಕರೆದಿದೆ. ಅದು ದೆಹಲಿಯನ್ನು ಸ್ತಬ್ಧಗೊಳಿಸಿದೆ. ರೈಲ್ವೆ ಮತ್ತು ಮೆಟ್ರೋ ಸೇವೆಯನ್ನು ನಿಲ್ಲಿಸಿದೆ. ದೆಹಲಿಯನ್ನು ಭಾರತ-ಪಾಕಿಸ್ತಾನ ಗಡಿಯಂತೆ ಒಂದು ಗಡಿಯನ್ನಾಗಿ ಪರಿವರ್ತಿಸಿದೆ. ಎಲ್ಲಾ ಭದ್ರತಾ ಪಡೆಗಳನ್ನು ದೆಹಲಿಗೆ ಕರೆಸಿಕೊಂಡಿದ್ದು, ವಿದ್ಯಾರ್ಥಿ ಸಂಘಟನೆಗಳನ್ನು, ವಿರೋಧ ಪಕ್ಷದವರನ್ನು ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಬೀದಿಗಳಲ್ಲಿ ಎಳೆದಾಡಲಾಗಿದೆ’ ಎಂದು ಕಿಡಿ ಕಾರಿದರು.

‘ಇಷ್ಟೆಲ್ಲಾ ಕೇವಲ ಒಬ್ಬ ಜ್ಞಾನೇಶ್ ಕುಮಾರ್‌ಗಾಗಿ ನಡೆಯುತ್ತಿದೆಯೇ?

‘ಇಷ್ಟೆಲ್ಲಾ ಕೇವಲ ಒಬ್ಬ ಜ್ಞಾನೇಶ್ ಕುಮಾರ್‌ಗಾಗಿ ನಡೆಯುತ್ತಿದೆಯೇ? ನರೇಂದ್ರ ಮೋದಿಯವರಿಗೆ ಜ್ಞಾನೇಶ್ ಅಷ್ಟೊಂದು ಮುಖ್ಯ ಏಕೆ? ಜ್ಞಾನೇಶ್ ಅವರು ಮೋದಿಯವರಿಗೆ ಚುನಾವಣೆಗಳಲ್ಲಿ ಗೆಲ್ಲಲು ಸಹಾಯ ಮಾಡುತ್ತಿದ್ದಾರೆ ಎಂದು ನಾವೇಕೆ ನಂಬಬಾರದು? ಒಂದು ವೇಳೆ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುತ್ತಿಲ್ಲ ಎಂದಾದರೆ, ಮೋದಿಯವರು ಅವರಿಗೆ ಇಷ್ಟೊಂದು ಭದ್ರತೆಯನ್ನು ಏಕೆ ಒದಗಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಸಭೆ ಮಧ್ಯೆ ‘ಇಲ್ಲಿಂದ ತೊಗಲಿ’ ಕೂಗು:

ಗುರುವಾರ ನಡೆದ ದೀಪ್ಕೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನೇಹಾ ಬೋರಾ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪತ್ರಿಕಾಗೋಷ್ಠಿಯಲ್ಲಿದ್ದ ಕೆಲವರು ‘ಬಂದ್ ಕರೋ... ದಫಾ ಹೋ ಜಾವೋ’ (ಇದನ್ನು ನಿಲ್ಲಿಸಿ... ಇಲ್ಲಿಂದ ತೊಲಗಿ) ಎಂದು ಕೂಗಿದರು. ತಕ್ಷಣ ನೇಹಾ ಬೋರಾ, ಗೊಂದಲ ಸೃಷ್ಟಿಸುತ್ತಿದ್ದವರನ್ನು ಹೊರಗೆ ಕರೆದೊಯ್ಯುವಂತೆ ಆಯೋಜಕರನ್ನು ಕೋರಿದರು.