ಸಾರಾಂಶ
ಬಿಹಾರ ನೂತನ ಸರ್ಕಾರ ನ.19 ಅಥವಾ 20ರಂದು ರಚನೆ ಆಗುವ ಸಾಧ್ಯತೆ ಇದ್ದು, ಯಾವ ಪಕ್ಷಕ್ಕೆ ಎಷ್ಟು ಸಚಿವ ಹುದ್ದೆ ಎಂಬ ಕಸರತ್ತು ಆರಂಭವಾಗಿದೆ. ಜೆಡಿಯು ನಾಯಕ ಹಾಗೂ ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಪುನಃ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಆದರೆ ಅವರ ಪಕ್ಷಕ್ಕೆ ಸಂಪುಟದಲ್ಲಿ ಬಿಜೆಪಿಗಿಂತ ಕಡಿಮೆ ಪ್ರಾತಿನಿಧ್ಯ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
- ನಿತೀಶ್ ಸಿಎಂ ಆದರೂ ಬಿಜೆಪಿ ಪಾಲು ಅಧಿಕ
- ಬಿಜೆಪಿಗೆ 16, ಜೆಡಿಯುಗೆ 14 ಸಚಿವ ಸ್ಥಾನ?- ಎಲ್‌ಜೆಪಿಗೆ 3, ಹಮ್, ಕುಶ್ವಾಹ ಪಕ್ಷಕ್ಕೆ ತಲಾ 1?
- 19 ಅಥವಾ 20ಕ್ಕೆ ಪ್ರಮಾಣವಚನ ಸಂಭವಪಟನಾ: ಬಿಹಾರ ನೂತನ ಸರ್ಕಾರ ನ.19 ಅಥವಾ 20ರಂದು ರಚನೆ ಆಗುವ ಸಾಧ್ಯತೆ ಇದ್ದು, ಯಾವ ಪಕ್ಷಕ್ಕೆ ಎಷ್ಟು ಸಚಿವ ಹುದ್ದೆ ಎಂಬ ಕಸರತ್ತು ಆರಂಭವಾಗಿದೆ. ಜೆಡಿಯು ನಾಯಕ ಹಾಗೂ ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಪುನಃ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಆದರೆ ಅವರ ಪಕ್ಷಕ್ಕೆ ಸಂಪುಟದಲ್ಲಿ ಬಿಜೆಪಿಗಿಂತ ಕಡಿಮೆ ಪ್ರಾತಿನಿಧ್ಯ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಶನಿವಾರ ಎನ್‌ಡಿಎ ಸಭೆ ನಡೆಯಿತು. ಅದರಲ್ಲಿ ಸರ್ಕಾರ ರಚನೆ ಸೂತ್ರ ಸಿದ್ಧವಾಗಿದೆ. ಬಿಜೆಪಿಯಿಂದ ಸುಮಾರು 15 ರಿಂದ 16 ಜನ ಸಚಿವರಾಗಲಿದ್ದಾರೆ. ಜೆಡಿಯುನಿಂದ 14 ಸಚಿವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
19 ಸ್ಥಾನಗಳನ್ನು ಪಡೆದ ಎನ್‌ಡಿಎಯ ಒಂದು ಘಟಕವಾದ ಲೋಕ ಜನಶಕ್ತಿ (ರಾಮ್ ವಿಲಾಸ್) 3, ಐದು ಸ್ಥಾನಗಳನ್ನು ಗೆದ್ದ ಜೀತನ್ ರಾಂ ಮಾಂಝಿ ಅವರ ‘ಹಮ್’ ಪಕ್ಷ ಮತ್ತು 4 ಸ್ಥಾನಗಳನ್ನು ಗೆದ್ದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಿದೆ. 6 ಶಾಸಕರಿಗೆ 1 ಸಚಿವ ಸ್ಥಾನ ಎಂಬ ಸೂತ್ರ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಮತ್ತು ಜೆಡಿಯು 85 ಸ್ಥಾನಗಳನ್ನು ಗೆದ್ದಿತ್ತು.
ಇಂದು ಸಂಪುಟ ಸಭೆ:ಸೋಮವಾರ ನಿತೀಶ್ ಸಂಪುಟ ಸಭೆ ನಡೆಸಲಿದ್ದು, ವಿಧಾನಸಭೆ ವಿಸಜೇನೆಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.
)
)
;Resize=(128,128))
;Resize=(128,128))