ಸಾರಾಂಶ
ದೇವನಹಳ್ಳಿ: ಬಿಹಾರದಲ್ಲಿ ಎನ್‌ಡಿಎ ದ್ವಿಶತಕ ಬಾರಿಸಿ ಮುನ್ನುಗ್ಗಿ ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಿಬಂಧನ್ ಛಿದ್ರವಾಗುವಂತೆ ಮಾಡಿರುವುದು ಮೋದಿಯವರ ಜನಪ್ರಿಯ ನಾಯಕತ್ವ, ಜನಪರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಬಣ್ಣಿಸಿದರು.
ದೇವನಹಳ್ಳಿ: ಬಿಹಾರದಲ್ಲಿ ಎನ್‌ಡಿಎ ದ್ವಿಶತಕ ಬಾರಿಸಿ ಮುನ್ನುಗ್ಗಿ ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಿಬಂಧನ್ ಛಿದ್ರವಾಗುವಂತೆ ಮಾಡಿರುವುದು ಮೋದಿಯವರ ಜನಪ್ರಿಯ ನಾಯಕತ್ವ, ಜನಪರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಬಣ್ಣಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದ ಮುಖ್ಯ ಹೆದ್ದಾರಿ ವೃತ್ತದಲ್ಲಿ ಬಿಹಾರ ಗೆಲುವಿನ ವಿಜಯೋತ್ಸವ ಆಚರಿಸಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಜಯಕಾರ ಹಾಕಿ ಸಂಭ್ರಮಾಚರಣೆ ಮಾಡಿ ಮಾತನಾಡಿದ ಅವರು, ಈ ಗೆಲುವು ವಿಶ್ವವೇ ನಿಬ್ಬೆರಾಗುವಂತೆ ಮಾಡಿದೆ. ದೇಶದ ಎಲ್ಲಾ ರಾಜ್ಯಗಳ ಬಿಜೆಪಿ ಕಾರ್ಯಕರ್ತರ ಉತ್ಸಾಹ ಮುಂದಿನ ಚುನಾವಣೆಗಳಿಗೆ ಸಜ್ಜಾಗಲು ದಿಕ್ಸೂಚಿಯಾಗಿದೆ. ವಿರೋಧ ಪಕ್ಷಗಳು ಏನೇ ಟೀಕೆ ಮಾಡಿದರೂ ಬಿಜೆಪಿ ಆಡಳಿತ ಹಾಗೂ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ನಮಗೆ ರಾಜ್ಯದಲ್ಲಿ ಮತ್ತಷ್ಟು ಬಲ ಬಂದಿದೆ. ಇದು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಹೇಳಿದರು.ಹಿರಿಯ ಮುಖಂಡ ದೇ.ಸೂ ನಾಗರಾಜ್ ಮಾತನಾಡಿ, ದೇಶದಲ್ಲಿ ಇನ್ನೂ 20 ವರ್ಷ ಬಿಜೆಪಿ ವರ್ಚಸ್ಸು ಆಡಳಿತಕ್ಕೆ ಕಡಿವಾಣ ಹಾಕಲು ಯಾವ ಪಕ್ಷಗಳಿಂದಲೂ ಸಾಧ್ಯವಿಲ್ಲ. ಗ್ರಾಮಾಂತರ ಜಿಲ್ಕೆಯ ನಾಲ್ಕು ಕ್ಷೇತ್ರಗಳಲ್ಲಿ 2028 ಬಿಜೆಪಿಯಿಂದ ಶಾಸಕರು ಚುನಾಯಿತರಾಗುವುದು ಖಚಿತ. ಇದಕ್ಕೂ ಮುನ್ನ ಪುರಸಭೆ ಹಾಗೂ ಜಿಪಂ, ತಾಪಂಗಳಿಗೆ ನಾವು ಸಜ್ಜಾಗುತ್ತೇವೆ ಅಲ್ಲಿಯೂ ಎನ್‌ಡಿಎ ಆಡಳಿತ ನಡೆಸಲಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಬುಳ್ಳಹಳ್ಳಿ ಎಂ.ರಾಜಪ್ಪ, ಎಸ್.ರಮೇಶಕುಮಾರ್, ಲಕ್ಷ್ಮೀ, ಎಂ.ಆರ್. ಮುನಿರಾಜು, ಪ್ರಭಾಕರ್, ವಾಸು, ವಿಜಯಕುಮಾರ್, ಡೈರಿ ನಾಗೇಶ್, ೨೩ನೇ ವಾರ್ಡ್ ನಾಗೇಶ್, ಅಣ್ಣೆ ಅಮಾನಿಕೆರೆ ಮಂಜುನಾಥ್, ಗಣೇಶ್, ಮನೋಜ್ ಇತರರು ಭಾಗವಹಿಸಿದ್ದರು.೧೫ ದೇವನಹಳ್ಳಿ ಚಿತ್ರಸುದ್ದಿ ೦೧:
ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿಯನ್ನು ದೇವನಹಳ್ಳಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.;Resize=(128,128))
;Resize=(128,128))