ಸಾರಾಂಶ
ಬಿಹಾರದಲ್ಲಿ ಪ್ರಮುಖ ವಿಪಕ್ಷ ಆರ್‌ಜೆಡಿ ಚುನಾವಣೆಯನ್ನು ಬಹಿಷ್ಕರಿಸುವ ಸುಳಿವು ನೀಡಿದೆ. ಆರ್‌ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್ ಮಾತನಾಡಿ, ‘ಚುನಾವಣಾ ಆಯೋಗವು ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದೆ. ಹೀಗಾದಲ್ಲಿ ಚುನಾವಣೆಯ ಪಾರದರ್ಶಕತೆ ಎಲ್ಲಿರುತ್ತದೆ’ ಎಂದಿದ್ದಾರೆ.
ಪಟನಾ: ವಿಧಾನಸಭೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಪ್ರಮುಖ ವಿಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಚುನಾವಣೆಯನ್ನು ಬಹಿಷ್ಕರಿಸುವ ಸುಳಿವು ನೀಡಿದೆ. ಆರ್‌ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್ ಮಾತನಾಡಿ, ‘ಚುನಾವಣಾ ಆಯೋಗವು ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದೆ. ಹೀಗಾದಲ್ಲಿ ಚುನಾವಣೆಯ ಪಾರದರ್ಶಕತೆ ಎಲ್ಲಿರುತ್ತದೆ’ ಎಂದಿದ್ದಾರೆ.
ಇದೇ ವೇಳೆ ಚುನಾವಣೆ ಬಹಿಷ್ಕರಿಸುವ ಕುರಿತು ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ, ಈ ಆಯ್ಕೆಯೂ ನಮ್ಮ ಮುಂದಿದೆ. ನಾವು ಮಿತ್ರ ಪಕ್ಷಗಳು, ಜನರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದಿದ್ದಾರೆ. ಚುನಾವಣಾ ಆಯೋಗ ಹೇಳಿದೆ.
ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಪರ ವಿರೋಧದ ಚರ್ಚೆ ನಡುವೆಯೇ ಚುನಾವಣಾ ಆಯೋಗ ‘ಮತಪಟ್ಟಿ ಪರಿಷ್ಕರಣೆಯಲ್ಲಿ 18 ಲಕ್ಷ ಮೃತರು, ಕ್ಷೇತ್ರ ಬದಲಾವಣೆ ಮಾಡಿದ 26 ಲಕ್ಷ ಜನರು ಮತ್ತು ಎರಡು ಕ್ಷೇತ್ರಗಳಲ್ಲಿ ಮತದಾನ ಅರ್ಹತೆ ಪಡೆದಿದ್ದ 7 ಲಕ್ಷ ಮಂದಿ ಹೆಸರನ್ನು ಕೈಬಿಡಲಾಗಿದೆ’ ಎಂದಿದೆ