ಸಾರಾಂಶ
ಉತ್ತಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ 80 ಕ್ಕೆ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಕೂಡ ಇವಿಎಂ ನಂಬುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.
ನವದೆಹಲಿ: ಉತ್ತಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ 80 ಕ್ಕೆ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಕೂಡ ಇವಿಎಂ ನಂಬುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.ಸಂಸತ್‌ನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅಖಿಲೇಶ್,‘ ‘ನಾನು ನಿನ್ನೆ ಇವಿಎಂಗಳನ್ನು ನಂಬುತ್ತಿರಲಿಲ್ಲ. ಇಂದೂ ನಂಬುವುದಿಲ್ಲ ಮತ್ತು ನಾನು ಯುಪಿಯಲ್ಲಿ ಎಲ್ಲ 80 ಕ್ಕೆ 80 ಸ್ಥಾನಗಳನ್ನು ಗೆದ್ದಿದ್ದರೂ ಕೂಡ ವಿದ್ಯುನ್ಮಾನ ಮತಯಂತ್ರವನ್ನು ನಂಬುತ್ತಿರಲಿಲ್ಲ. ಇವಿಎಂ ಮೇಲಿನ ಸಮಸ್ಯೆಗಳು ಸತ್ತಿಲ್ಲ. ಸಮಾಜವಾದಿ ಪಕ್ಷ ಅದರ ಮೇಲೆ ಅಚಲವಾಗಿ ಉಳಿಯುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಪಿ ನಾಯಕ‘ ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ನಂತರ ಇವಿಎಂಗಳನ್ನು ತೆಗೆದುಹಾಕುತ್ತದೆ’ ಎಂದರು ಹಾಗೂ ಕಳೆದ ಚುನಾವಣೆ ಕೋಮುವಾದಿ ಪಕ್ಷಗಳನ್ನು ಸೋಲಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದರು.