ಮಹಾರಾಷ್ಟ್ರ ಉಳಿಯುವಿಕೆಗಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಮೈತ್ರಿಕೂಟ ಕಾಂಗ್ರೆಸ್‌, ಎನ್‌ಸಿಪಿಯ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಗೆ ತಾವು ಬೆಂಬಲಿಸುತ್ತೇವೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಪಿಟಿಐ ಮುಂಬೈ (ಮಹಾರಾಷ್ಟ್ರ)

ಮಹಾರಾಷ್ಟ್ರ ಉಳಿಯುವಿಕೆಗಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಮೈತ್ರಿಕೂಟ ಕಾಂಗ್ರೆಸ್‌, ಎನ್‌ಸಿಪಿಯ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಗೆ ತಾವು ಬೆಂಬಲಿಸುತ್ತೇವೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಈ ನಡುವೆ, ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ಠಾಕ್ರೆ ಮಾತನ್ನು ಅನುಮೋದಿಸಿದ್ದಾರೆ. ಈ ಮುನ್ನ ಮಹಾ ವಿಕಾಸ ಅಘಾಡಿ (ಎಂವಿಎ) ಕೂಟದಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಮೈತ್ರಿಕೂಟದಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನಾ (ಯುಬಿಟಿ) ಇವೆ. 88 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

ಇಲ್ಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಜಾಹೀರಾತು ಮೂಲಕ ಸುಳ್ಳು ನಿರೂಪಣೆಗಳನ್ನು ಮಾಡುತ್ತಿದೆ. ಲಡ್ಕಿ ಬಹಿನ್‌ ಯೋಜನೆ ಹೆಸರಲ್ಲಿ ಅರ್ಹ ಮಹಿಳೆಯರಿಗೆ 1,500 ಎಂದು ಜನರು ತಮ್ಮ ಹಣವನ್ನೇ ನೀಡುವ ಮೂಲಕ ‘ಮಹಾರಾಷ್ಟ್ರ ಧರ್ಮ’ಕ್ಕೆ ದ್ರೋಹ ಬಗೆಯುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಮಹಾಯುತಿ ಸರ್ಕಾರವನ್ನು ಟೀಕಿಸಿದ್ದಾರೆ.