ಸಾರಾಂಶ
ಅಪರೂಪದ ಪ್ರಕರಣವೊಂದರಲ್ಲಿ ಪೋಕ್ಸೋ ಕಾಯ್ದೆಯಡಿ ಸ್ಥಳೀಯ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಹೈದರಾಬಾದ್: ಅಪರೂಪದ ಪ್ರಕರಣವೊಂದರಲ್ಲಿ ಪೋಕ್ಸೋ ಕಾಯ್ದೆಯಡಿ ಸ್ಥಳೀಯ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕನಿಗೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕನ ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಮಹಿಳೆ, ಅಪ್ರಾಪ್ತ ಬಾಲಕನಿಗೆ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಹಾಗೂ ತಮ್ಮ ಮನೆಯಿಂದ ಹಣ ಹಾಗೂ ಆಭರಣಗಳನ್ನು ತರುವಂತೆ ಒತ್ತಾಯಿಸುತ್ತಿದ್ದಳು.
ಒಂದು ದಿನ ಅವರಿಬ್ಬರೂ ಹಣ ಹಾಗೂ ಆಭರಣದ ಸಮೇತ ಚೆನ್ನೈಗೆ ಪರಾರಿಯಾಗಿದ್ದರು. ಬಳಿಕ ಹುಡುಗನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಬಿಗಿಯಾದ ಬಳಿಕ ಮಹಿಳೆಯೇ ಅಪ್ರಾಪ್ತನನ್ನು ಅವರ ಮನೆಗೆ ತಂದು ಒಪ್ಪಿಸಿದ್ದಾಳೆ. ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.