ಬೈಕ್‌ಗೆ ಪತ್ನಿಯ ಕಟ್ಟಿ ಎಳೆದೊಯ್ದ ಪತಿ!

| Published : Aug 14 2024, 12:46 AM IST

ಸಾರಾಂಶ

ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

ಜೈಪುರ: ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

ವೈರಲ್‌ ಆದ ವಿಡಿಯೋದಲ್ಲಿ ಪ್ರೇಮ್‌ರಾಮ್‌ ಮೇಘ್ವಾಲ್‌ ಎಂಬಾತ ಪತ್ನಿಯ ಎರಡೂ ಕಾಲುಗಳನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾನೆ. ಬಳಿಕ ಬೈಕ್‌ ನಿಲ್ಲಿಸಿ ಆಕೆಯ ದೇಹವನ್ನು ಮೆಟ್ಟಿಕೊಂಡು ನಿಂತಿರುವುದು ಕಂಡುಬಂದಿದೆ

ಕಳೆದ ತಿಂಗಳು ನಡೆದಿದೆ ಎನ್ನಲಾದ ಘಟನೆ ಕುರಿತು ಪೊಲೀಸರು ಮಹಿಳೆಯ ಪತಿ ಪ್ರೇಮರಾಮ್‌ ಮತ್ತು ಆಕೆಯ ಮೇಲಿನ ದೌರ್ಜನ್ಯ ತಡೆಯದೇ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣದ ದಾಖಲಿಸಿದ್ದಾರೆ ಹಾಗೂ ಪ್ರೇಮರಾಮ್‌ನನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ಮಹಿಳೆ ದೂರು ನೀಡದೆ ಬಂಧುಗಳ ಮನೆಗೆ ಹೋಗಿ ನೆಲೆಸಿದ್ದಳು. ವಿಡಿಯೋ ವೈರಲ್‌ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಈ ನಡುವೆ ಮಾನವ ಕಳ್ಳಸಾಗಣೆಯ ಕೋನದಿಂದಲೂ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.