ನೈಜ ಪ್ರೀತಿಗೆ ಸಾವಿಲ್ಲ ಎನ್ನುವ ಮಾತಿಗೆ. ಅದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ 20 ವರ್ಷದ ಯುವತಿ ತನ್ನ ತಂದೆ ಮತ್ತು ಸಹೋದರನಿಂದ ಹತ್ಯೆಯಾದ ಪ್ರಿಯಕರ ಮೃತದೇಹವನ್ನೇ ಸಿಂದೂರ ಹಚ್ಚಿಕೊಂಡು ಮದುವೆಯಾಗಿದ್ದಾಳೆ. ಮಾತ್ರವಲ್ಲದೇ ಆತನ ಮನೆಯಲ್ಲಿಯೇ ಬದುಕುವ ಪ್ರತಿಜ್ಞೆ ಮಾಡಿದ್ದಾಳೆ.

ಮುಂಬೈ: ನೈಜ ಪ್ರೀತಿಗೆ ಸಾವಿಲ್ಲ ಎನ್ನುವ ಮಾತಿಗೆ. ಅದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ 20 ವರ್ಷದ ಯುವತಿ ತನ್ನ ತಂದೆ ಮತ್ತು ಸಹೋದರನಿಂದ ಹತ್ಯೆಯಾದ ಪ್ರಿಯಕರ ಮೃತದೇಹವನ್ನೇ ಸಿಂದೂರ ಹಚ್ಚಿಕೊಂಡು ಮದುವೆಯಾಗಿದ್ದಾಳೆ. ಮಾತ್ರವಲ್ಲದೇ ಆತನ ಮನೆಯಲ್ಲಿಯೇ ಬದುಕುವ ಪ್ರತಿಜ್ಞೆ ಮಾಡಿದ್ದಾಳೆ.

ಮೂರು ವರ್ಷಗಳಿಂದ ಪ್ರೀತಿಯಲ್ಲಿ

ಈ ಘಟನೆಗೆ ಸಾಕ್ಷಿಯಾಗಿರುವುದು ನಾಂದೇಡ್‌ ಜಿಲ್ಲೆ. 20 ವರ್ಷದ ಅಂಚಲ್ ಎನ್ನುವ ಯುವತಿಗೆ ತನ್ನ ಸಹೋದರನ ಮೂಲಕ ಸಕ್ಷಮ್‌ ಟಾಟೆ ಎಂಬಾತನ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಜಾತಿಯವರಾದ ಕಾರಣ ಯುವತಿ ಕುಟುಂಬಸ್ಥರು ಇದನ್ನು ವಿರೋಧಿಸಿದ್ದರು. ಆದರೆ ಆಕೆ ಸಕ್ಷಮ್‌ನನ್ನು ಬಿಟ್ಟಿರಲಿಲ್ಲ. ಈ ನಡುವೆ ಅಂಚಲ್ ಆತನನ್ನು ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾಳೆ ಎಂದು ತಿಳಿದು ಸಿಟ್ಟಿಗೆದ್ದ ಆಕೆಯ ತಂದೆ ಮತ್ತು ಸಹೋದರ ಥಳಿಸಿ, ಗುಂಡು ಹಾರಿಸಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮೃತದೇಹ ವರಿಸಿದ ಅಂಚಲ್:

ತನ್ನ ಪ್ರೇಮಿಯ ಸಾವಿನಿಂದ ನೊಂದ ಯುವತಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಅಂಚಲ್‌ ಅಂತಿಮ ಕಾರ್ಯಕ್ರಮದ ವೇಳೆ ತನ್ನ ಹಣೆಗೆ ಸಿಂದೂರ ಹಚ್ಚಿಕೊಂಡು ಮದುವೆಯಾಗಿದ್ದಾಳೆ. ಮಾತ್ರವಲ್ಲದೇ ಜೀವನಪರ್ಯಂತ ಸಕ್ಷಮ್‌ ಮನೆಯಲ್ಲಿಯೇ ಆತನ ಪತ್ನಿಯಾಗಿ ಬದುಕುವ ಪ್ರತಿಜ್ಞೆ ಮಾಡಿದ್ದಾಳೆ. ಅಲ್ಲದೇ ಪ್ರಿಯಕರನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾಳೆ.