ಟಿಕೆಟ್‌ ಕೊಳ್ಳಲು ದುಡ್ಡಿಲ್ಲ ಎಂದು ರೈಲಿನ ಕೆಳಗೆ ಕುಳಿತು 250 ಕಿ. ಮೀ ಪ್ರಯಾಣ !

| Published : Dec 28 2024, 01:01 AM IST / Updated: Dec 28 2024, 04:17 AM IST

ಸಾರಾಂಶ

 ಟಿಕೆಟ್‌ ಕೊಳ್ಳಲು ಕಾಸಿಲ್ಲದ ಕಾರಣ ವ್ಯಕ್ತಿಯೊಬ್ಬ ರೈಲಿನ ಬೋಗಿಯಡಿ ಕುಳಿತು ಬರೋಬ್ಬರಿ 250 ಕಿ.ಮೀ ಪ್ರಯಾಣಿಸಿದ ಬೆಚ್ಚಿಬೀಳೀಸುವ ಘಟನೆ ಡಿ.24ರಂದು ನಡೆದಿದೆ.

ಜಬಲ್ಪುರ: ಟಿಕೆಟ್‌ ಕೊಳ್ಳಲು ಕಾಸಿಲ್ಲದ ಕಾರಣ ವ್ಯಕ್ತಿಯೊಬ್ಬ ರೈಲಿನ ಬೋಗಿಯಡಿ ಕುಳಿತು ಬರೋಬ್ಬರಿ 250 ಕಿ.ಮೀ ಪ್ರಯಾಣಿಸಿದ ಬೆಚ್ಚಿಬೀಳೀಸುವ ಘಟನೆ ಡಿ.24ರಂದು ನಡೆದಿದೆ.

ಇಟಾರ್ಸಿಯಿಂದ ಜಬಲ್ಪುರಕ್ಕೆ ಬಂದ ದಾನಾಪುರ ಎಕ್ಸಪ್ರೆಸ್‌ ರೈಲಿನ ಪರಿಶೀಲನೆ ವೇಳೆ ರೈಲ್ವೇ ಸಿಬ್ಬಂದಿಗೆ ಬೋಗಿಯ ಅಡಿ 2 ಚಕ್ರಗಳ ನಡುವೆ ಯುವಕನೊಬ್ಬ ಕಾಣಿಸಿದ್ದು, ಭದ್ರತಾ ದೃಷ್ಟಿಯಿಂದ ಕೂಡಲೇ ರೈಲನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಲಾಗಿದೆ. ಬಳಿಕ ವಿಚಾರಣೆ ವೇಳೆ ತನ್ನ ಬಳಿ ಹಣವಿಲ್ಲದ ಕಾರಣ ಇಂತಹ ಸಾಹಸಕ್ಕೆ ಕೈಹಾಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಆ ಯುವಕ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಆತನ ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ. ಆದಾಗ್ಯೂ ಆತ 250 ಕಿ.ಮೀ.ನಷ್ಟು ದೂರ ಹೇಗೆ ರೈಲಿನ ಕೆಳಗೆ ಕುಳಿತು ಹೇಗೆ ಪ್ರಯಾಣಿಸಿದ ಎಂಬುದು ಅಚ್ಚರಿಯ ವಿಷಯವಾಗಿದೆ.