ಸಾರಾಂಶ
ಶಾರೂಖ್ ಖಾನ್ ಒಡೆತನದ ರೆಡ್‌ಚಿಲ್ಲೀಸ್ ಸಂಸ್ಥೆಯೊಂದಿಗೆ ರಾಕಿಂಗ್ ಸ್ಟಾರ್ ಚಿತ್ರವೊಂದರಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಮುಂಬೈ: ಕೆಜಿಎಫ್ ಸರಣಿಯ ಮೂಲಕ ಸಮಸ್ತ ವಿಶ್ವವೇ ಸ್ಯಾಂಡಲ್‌ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನಟ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಜೊತೆಗೆ ಹೊಸ ಚಿತ್ರ ಮಾಡಲು ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.
ಆದರೆ ಈ ಕುರಿತು ಯಶ್ ತಂಡ ನಿರಾಕರಿಸಿದ್ದು, ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಯಶ್ ಅವರು ಪ್ರಸ್ತುತ ಗೀತು ಮೋಹನ್‌ದಾಸ್ ಅವರ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಕುರಿತ ಚಿತ್ರ ಮತ್ತು ಕೆಜಿಎಫ್-3 ಚಿತ್ರಗಳಲ್ಲಿ ನಟಿಸಬೇಕಿದೆ.