ಸಾರಾಂಶ
ವೈಎಸ್‌ಆರ್‌ಸಿಪಿ ಪಕ್ಷವಯ ತನ್ನ ಎಲ್ಲ ಲೋಕಸಭಾ ಮತ್ತು ವಿಧಾನಸಭಾ ಅಭ್ಯರ್ಥಿಗಳನ್ನು ಆಂಧ್ರಪ್ರದೇಶದಲ್ಲಿ ಏಕಕಾಲಕ್ಕೆ ಘೋಷಿಸಿದೆ.
ಅಮರಾವತಿ: ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆಂಧ್ರಪ್ರದೇಶದ ಎಲ್ಲ 25 ಲೋಕಸಭೆ ಮತ್ತು ಎಲ್ಲ 175 ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಕಡಪಾ ಜಿಲ್ಲೆಯ ಇಡುಪುಲುಪಾಯದಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸಮಾಧಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತು.
ನರಸಾಪುರಂ ವಿಧಾನಸಭಾ ಕ್ಷೇತ್ರದಿಂದ ಜಿ. ಉಮಾ ಬಾಲಾ, ನೆಲ್ಲೂರಿನಿಂದ ವಿ. ವಿಜಯಸಾಯಿ ರೆಡ್ಡಿ ಸ್ಪರ್ಧಿಸಲಿದ್ದಾರೆ.
ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರದಿಂದ ಬಿಝಾನ್ಸಿ ಲಕ್ಷ್ಮಿ, ಕಡಪ ಕ್ಷೇತ್ರದಿಂದ ಹಾಲಿ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಸ್ಪರ್ಧಿಸಲಿದ್ದಾರೆ.