ಎನ್‌ಡಿಎಗೆ 377 ಸೀಟು: ಝೀ ನ್ಯೂಸ್‌ ಚುನಾವಣಾ ಸಮೀಕ್ಷೆ

| Published : Feb 29 2024, 02:04 AM IST / Updated: Feb 29 2024, 11:33 AM IST

ಸಾರಾಂಶ

ದೇಶಾದ್ಯಂತ ಬಿಜೆಪಿ 377 ಸ್ಥಾನ ಗಳಿಸಲಿದ್ದು, ಕರ್ನಾಟಕದಲ್ಲಿ ಎನ್‌ಡಿಎ 23 ಸ್ಥಾನ ಗಳಿಸಲಿದೆ ಎಂದು ಝೀನ್ಯೂಸ್‌ ಸಮೀಕ್ಷೆ ತಿಳಿಸಿದೆ.

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 377 ಸೀಟು ಗೆಲ್ಲಲಿದೆ. ಇಂಡಿಯಾ ಕೂಟಕ್ಕೆ ಕೇವಲ 93 ಸೀಟು ಬರಲಿವೆ ಎಂದು ಝೀ ನ್ಯೂಶ್-ಮ್ಯಾಟ್ರಿಜ್‌ ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ.

ಕಳೆದ ಚುನಾವಣೆಯಲ್ಲಿ ಎನ್‌ಡಿಎ 351 ಹಾಗೂ ಯುಪಿಎ 90 ಸ್ಥಾನ ಗಳಿಸಿದ್ದವು.ಇದೇ ವೇಳೆ, ಕರ್ನಾಟಕದಲ್ಲಿ ಎನ್‌ಡಿಎ 23 ಹಾಗೂ ಕಾಂಗ್ರೆಸ್‌ 5 ಸ್ಥಾನ ಗೆಲ್ಲಿದೆ ಎಂದು ಸಮೀಕ್ಷೆ ಹೇಳಿದೆ, ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್‌ 1 ಹಾಗೂ ಪಕ್ಷೇತರರು 1 ಸ್ಥಾನ ಗಳಿಸಿದ್ದರು.