3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧಕ್ಕೆ ತೆರೆ ಎಳೆಯಲು ಸೌದಿಯಲ್ಲಿ ಅಮೆರಿಕ ಸಂಧಾನ?

| N/A | Published : Feb 18 2025, 12:33 AM IST / Updated: Feb 18 2025, 04:24 AM IST

3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧಕ್ಕೆ ತೆರೆ ಎಳೆಯಲು ಸೌದಿಯಲ್ಲಿ ಅಮೆರಿಕ ಸಂಧಾನ?
Share this Article
  • FB
  • TW
  • Linkdin
  • Email

ಸಾರಾಂಶ

3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧಕ್ಕೆ ತೆರೆ ಎಳೆಯಲು ಮಧ್ಯಸ್ಥಿಕೆ ವಹಿಸಿರುವ ಅಮೆರಿಕ ಇದರ ಭಾಗವಾಗಿ ಮಂಗಳವಾರ ಮತ್ತು ಬುಧವಾರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದೆ.

ವಾಷಿಂಗ್ಟನ್‌: 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧಕ್ಕೆ ತೆರೆ ಎಳೆಯಲು ಮಧ್ಯಸ್ಥಿಕೆ ವಹಿಸಿರುವ ಅಮೆರಿಕ ಇದರ ಭಾಗವಾಗಿ ಮಂಗಳವಾರ ಮತ್ತು ಬುಧವಾರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದೆ. ಅಮೆರಿಕ ಮತ್ತು ರಷ್ಯಾದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದು, ಭವಿಷ್ಯದಲ್ಲಿ ನಡೆಸಲು ಉದ್ದೇಶಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿನಡುವಿನ ನೇರ ಮಾತುಕತೆಗೆ ಈ ಸಭೆಯಲ್ಲಿ ವೇದಿಕೆ ಸಿದ್ಧಪಡಿಸುವ ಕೆಲಸ ಮಾಡಲಿದ್ದಾರೆ.

ಈ ನಡುವೆ ಬೇರೊಂದು ಕಾರ್ಯಕ್ರಮದ ಭಾಗವಾಗಿ ಜೆಲೆನ್ಸ್ಕಿ ಬುಧವಾರ ರಿಯಾದ್‌ಗೆ ಆಗಮಿಸಲಿದ್ದು ಅವರೊಂದಿಗೂ ಟ್ರಂಪ್‌ ದೂತರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮಂಗಳವಾರದ ಸಭೆಗೆ ನಮಗೆ ಆಹ್ವಾನ ನೀಡಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ನಡೆಯುವ ಮಾತುಕತೆಯ ಫಲಶ್ರುತಿಯನ್ನು ನಾವು ಒಪ್ಪುವುದಿಲ್ಲ ಎಂದು ಜೆಲೆನ್ಸ್ಕಿ ಹೇಳಿದ್ದಾರೆ. ಹೀಗಾಗಿ ಮುಂದಿನ ಎರಡು ದಿನಗಳ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚುನಾವಣೆಗೂ ಮುನ್ನ, ಅಧಿಕಾರಕ್ಕೆ ಬಂದರೆ ರಷ್ಯಾ ಉಕ್ರೇನ್‌ ಯುದ್ಧ ನಿಲ್ಲಿಸುವುದಾಗಿ ಭರವಸೆ ಕೊಟ್ಟಿದ್ದರು. ಬಳಿಕ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಹಲವು ಹಿಂಬಾಗಿಲ ಮಾತುಕತೆಯಲ್ಲಿ ತೊಡಗಿದ್ದರು. ಈಗ ಸಂಧಾನ ಮಾತುಕತೆ ಮಹತ್ತರ ಘಟಕ್ಕೆ ಬಂದಿದೆ ಎಂದು ಹೇಳಲಾಗಿದೆ.

2022ರಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧದಲ್ಲಿ ಈವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದೆ.

ಯುದ್ಧಕ್ಕೆ ಕಾರಣವೇನು?

2022ರಲ್ಲಿ ಉಕ್ರೇನ್‌ ಅಮೆರಿಕ ಬೆಂಬಲಿತ ನ್ಯಾಟೋ ಕೂಟಕ್ಕೆ ಸೇರಲು ಇಚ್ಛಿಸಿತ್ತು. ಈ ಬೆಳವಣಿಗೆಯೂ ರಷ್ಯಾ ಅಸಮಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ 2021ರ ಮುಕ್ತಾಯದ ವೇಳೆ ಉಕ್ರೇನ್‌ ಗಡಿ ಸುತ್ತಲೂ ರಷ್ಯಾ ತನ್ನ ಸೇನೆಯನ್ನು ಜಮಾವಣೆ ಮಾಡಿತ್ತು. ಬಳಿಕ ಪುಟಿನ್‌ ವಿಶೇಷ ಕಾರ್ಯಾಚರಣೆಗೆ ಕರೆ ನೀಡಿದರು. ಅದು ಬಳಿಕ ಯುದ್ಧವಾಗಿ ಮಾರ್ಪಾಡಾಯಿತು.