ದುರಂತ ಅಂತ್ಯ ಕಂಡ ಗಾಯಕ ಜುಬಿನ್‌ ಅಂತಿಮ ದರ್ಶನ ಲಿಮ್ಕಾ ದಾಖಲೆ

| N/A | Published : Sep 23 2025, 01:04 AM IST

ದುರಂತ ಅಂತ್ಯ ಕಂಡ ಗಾಯಕ ಜುಬಿನ್‌ ಅಂತಿಮ ದರ್ಶನ ಲಿಮ್ಕಾ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಶುಕ್ರವಾರ ಸಿಂಗಾಪುರದಲ್ಲಿ ದುರಂತ ಅಂತ್ಯ ಕಂಡ ಗಾಯಕ ಜುಬೀನ್‌ ಗಾರ್ಗ್‌ ಅವರ ಅಂತಿಮ ಯಾತ್ರೆಯು ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರಿದ ಅಂತಿಮ ದರ್ಶನ ಯಾತ್ರೆಯ ಪೈಕಿ 4ನೇ ಸ್ಥಾನ ಪಡೆದು ಲಿಮ್ಕಾ ದಾಖಲೆ ನಿರ್ಮಿಸಿದೆ.

 ಗುವಾಹಟಿ: ಕಳೆದ ಶುಕ್ರವಾರ ಸಿಂಗಾಪುರದಲ್ಲಿ ದುರಂತ ಅಂತ್ಯಕಂಡ ಗಾಯಕ ಜುಬೀನ್‌ ಗಾರ್ಗ್‌ ಅವರ ಅಂತಿಮ ಯಾತ್ರೆಯು ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರಿದ ಅಂತಿಮ ದರ್ಶನ ಯಾತ್ರೆಯ ಪೈಕಿ 4ನೇ ಸ್ಥಾನ ಪಡೆದು ಲಿಮ್ಕಾ ದಾಖಲೆ ನಿರ್ಮಿಸಿದೆ.

ಮೈಕೆಲ್‌ ಜಾಕ್ಸನ್‌ , ಪೋಪ್‌ ಫ್ರಾನ್ಸಿಸ್‌, ರಾಣಿ ಎಲಿಜಬೆತ್‌-2 ಅವರ ಬಳಿಕ ಜುಬೀನ್ ಅವರ ಅಂತಿಮ ದರ್ಶನಕ್ಕೆ ಅತಿಹೆಚ್ಚು ಜನರು ಭಾನುವಾರ ಹಾಗೂ ಸೋಮವಾರ ಸೇರಿದ್ದರು. ಎಲ್ಲಿ ನೋಡಿದರೂ ಜನಸಾಗರವೇ ಗುವಾಹಟಿಯಲ್ಲಿ ಕಂಡುಬಂತು.

ಸೆ.19ರಂದು ಸಿಂಗಾಪುರದಲ್ಲಿ ಮೃತಪಟ್ಟಿದ್ದ ಜುಬೀನ್‌ ಅವರ ಮೃತದೇಹವನ್ನು ಭಾನುವಾರ ಅಸ್ಸಾಂಗೆ ಕರೆ ತರಲಾಯಿತು. ಈ ವೇಳೆ ವಿಮಾನ ನಿಲ್ದಾಣದಿಂದ ಅವರ ನಿವಾಸದ ತನಕ ಸುಮಾರು 25 ಕಿ.ಮೀ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

6.2 ಎಕರೆ ಸ್ಮಾರಕ:

ಗಾರ್ಗ್‌ ಅಂತ್ಯಕ್ರಿಯೆ ಸೆ.23ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅವರಿಗೆಂದು ಸರ್ಕಾರ 6.5 ಎಕರೆ ವಿಸ್ತೀರ್ಣದಲ್ಲಿ ಸ್ಮಾರಕ ನಿರ್ಮಿಸಲಿದೆ. ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾ ಸಂಕೀರ್ಣದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಅಸ್ಸಾಂ ಸಿಎಂ ಹಿಮಂತ್‌ ಬಿಸ್ವ ಶರ್ಮಾ ಹೇಳಿದ್ದಾರೆ.

ಜುಬಿನ್‌ ಸ್ಮರಣಾರ್ಥ ರಾಜ್ಯದಲ್ಲಿ ಮಂಗಳವಾರ ಎಲ್ಲಾ ಶಾಲಾ ಕಾಲೇಜು, ವಿವಿಗಳಿಗೆ ರಜೆ ನೀಡಲಾಗಿದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಲಿದ್ದಾರೆ.

ಮತ್ತೊಮ್ಮೆ ಪೋಸ್ಟ್‌ಮಾರ್ಟಂ:

ಈ ನಡುವೆ, ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ಮೃತರಾದ ಜುಬಿನ್‌ ಸಾವಿನ ಬಗ್ಗೆ ನಾನಾ ಸಂದೇಹ ಇವೆ. ಹೀಗಾಗಿ ಸಿಂಗಾಪುರದಲ್ಲಿ ಪೋಸ್ಟ್‌ಮಾರ್ಟಂ ನಡೆದಿದ್ದರೂ ಪುನಃ ಅಸ್ಸಾಂ ವೈದ್ಯರಿಂದಲೂ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.

Read more Articles on