ವಿವೇಕಾನಂದರ ಮಾರ್ಗ ಅನುಸರಿಸಿ: ಶಿವಶರಣ ಲಾಳಸಂಗಿ

| Published : Jan 13 2024, 01:34 AM IST

ವಿವೇಕಾನಂದರ ಮಾರ್ಗ ಅನುಸರಿಸಿ: ಶಿವಶರಣ ಲಾಳಸಂಗಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಸ್ವಾಮಿ ವಿವೇಕಾನಂದರು ಯುವಜನಾಂಗ ಆತ್ಮ ವಿಶ್ವಾಸ, ಶ್ರದ್ದೆ, ಧೈರ್ಯ ತುಂಬಿಕೊಂಡು ಸ್ಪೂರ್ತಿಯ ಸೆಲೆಯಾಗಿ, ದೇಶದಲ್ಲಿ ಅಭಿವೃದ್ಧಿ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿವೇಕಾನಂದರು ಆಶಯ ಹೊಂದಿದ್ದರು

ಕನ್ನಡಪ್ರಭ ವಾರ್ತೆ ವಿಜಯಪುರಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಮಾತ್ರ ಭಾರತ ವಿಶ್ವದಲ್ಲೇ ಮಾದರಿ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗುವುದು ಎಂದು ಯುವ ಮುಖಂಡ ಶಿವಶರಣ ಲಾಳಸಂಗಿ ಹೇಳಿದರು.

ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಸ್ವಾಮಿ ವಿವೇಕಾನಂದರು ಯುವಜನಾಂಗ ಆತ್ಮ ವಿಶ್ವಾಸ, ಶ್ರದ್ದೆ, ಧೈರ್ಯ ತುಂಬಿಕೊಂಡು ಸ್ಪೂರ್ತಿಯ ಸೆಲೆಯಾಗಿ, ದೇಶದಲ್ಲಿ ಅಭಿವೃದ್ಧಿ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿವೇಕಾನಂದರು ಆಶಯ ಹೊಂದಿದ್ದರು ಎಂದರು.ಈ ವೇಳೆ ಶಿವಾನಂದ ಲಾಳಸಂಗಿ, ಮುದಕಣ್ಣ ಅವಟಿ, ಅನಿಲ ಒಂಟಿ, ವಿಶ್ವನಾಥ ರೆವೂರ, ಆನಂದ ರಾಠೋಡ, ಶರಣು ಮಾಗಾಂವಿ, ಶಿವರಾಜ ಬಿರಾದಾರ, ಸಿದ್ರಾಮ ಉಪ್ಪಿನ, ಗುರುರಾಜ ಪೂಜಾರಿ, ಮಂಜುನಾಥ ಬಿರಾದಾರ, ಶಶಿಧರ ಮಳ್ಳಿ, ಮಲ್ಲಿಕಾರ್ಜುನ ಶೆಟಗಾರ, ವಿಕ್ರಮ ಸುತಾರ, ಸುನೀಲ ಮೋದಿ ಸೇರಿದಂತೆ ಮತ್ತಿತರರು ಇದ್ದರು.