ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಎಂಎಜಿ ಸರ್ಕಲ್ ಬಳಿಯೊಂದರ ಖಾಸಗಿ ಬಂಕ್‌ವೊಂದರಲ್ಲಿ ಪೆಟ್ರೋಲ್ ಬ್ಯಾರೇಲ್‌ಗೆ ಡಿಸೇಲ್ ಸಪ್ಲಾಯ್, ಬೈಕ್ ಸ್ಟಾಟ್ ಆಗದ ಹಿನ್ನೆಲೆಯಲ್ಲಿ ದೂರು ಬಂದಿದ್ದರಿಂದ ತಹಸೀಲ್ದಾರ್ ವರದರಾಜ್ ಹಾಗೂ ಆಹಾರ ಇಲಾಖೆಯ ಇನ್ಸ್‌ಫೆಕ್ಟರ್ ಅಂಜನ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣದ ಎಂಎಜಿ ಸರ್ಕಲ್ ಸಮೀಪದಲ್ಲಿ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡಿದ್ದ ತಾಲೂಕಿನ ಪಳವಳ್ಳಿ ಮೂಲದ ವ್ಯಕ್ತಿಯೊಬ್ಬ ಬೈಕ್ ಸ್ಟಾಟ್ ಮಾಡಿಕೊಂಡು ಸ್ವಲ್ಪದೂರ ಹೋಗುವುದರಲ್ಲಿಯೇ ಬೈಕ್ ಆಫ್ ಆಗಿದೆ. ಸರ್ವೀಸ್ ಸೆಂಟರ್ ಬಳಿ ಪರಿಶೀಲಿಸಿದಾಗ ಕಲಬೆರಿಕೆಯ ಪೆಟ್ರೋಲ್‌ನಿಂದ ಬೈಕ್ ಸ್ಟಾಟ್ ಆಗುತ್ತಿಲ್ಲ ಎಂದು ಸರ್ವೀಸ್ ಸೆಂಟರ್ ವರ್ಕರ್ಸ್ ತಿಳಿಸಿದ್ದಾರೆ.
ಈ ವೇಳೆ ವಿಚಾರಿಸಿದಾಗ ಬಂಕ್ ವರ್ಕರ್ಸ್‌ನಿಂದ ಸೂಕ್ತ ಮಾಹಿತಿ ಲಭ್ಯವಾಗದ ಕಾರಣ ಕೂಡಲೇ ತಹಸೀಲ್ದಾರ್‌ಗೆ ದೂರು ನೀಡಲಾಗಿದೆ. ತಹಸೀಲ್ದಾರ್ ವರದರಾಜ್, ಆಹಾರ ಇಲಾಖೆಯ ಇನ್ಸ್‌ಪೆಕ್ಟರ್ ಅಂಜನ್‌ಕುಮಾರ್ ಆಗಮಿಸಿ ಬಂಕ್ ಪರಿಶೀಲಿಸಿದಾಗ ಪೆಟ್ರೋಲ್, ಡಿಸೇಲ್ ಕಲಬೆರಿಕೆ ಮಾರಾಟದ ಬಗ್ಗೆ ಮಾಹಿತಿ ಲಭ್ಯವಾಗಿದೆ.ಆಹಾರ ಇಲಾಖೆಯ ಇನ್ಸ್‌ಪೆಕ್ಟರ್ ಅಂಜನ್‌ಕುಮಾರ್ ಮಾತನಾಡಿ, ಪೆಟ್ರೋಲ್, ಡೀಸೆಲ್ ವಿಲೇವಾರಿಗಾಗಿ ಜೂ 28ರಂದು ಮಧ್ಯಾಹ್ನ ಲಾರಿವೊಂದು ಬಂಕ್ ಬಳಿ ಆಗಮಿಸಿದೆ. ಇಂದನವನ್ನು ಲಾರಿಯಿಂದ ಬಂಕ್‌ನ ಬ್ಯಾರಲ್‌ಗಳಿಗೆ ತುಂಬಿಸುವಾಗ ಕಣ್ತಪ್ಪಿನಿಂದ ಪೆಟ್ರೋಲ್ ಬ್ಯಾರಲ್‌ಗೆ ಡಿಸೇಲ್ ಸಪ್ಲಾಯ್ ಆಗಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದರು.
ಸುಮಾರು 4 ಲಕ್ಷ ರು. ಮೌಲ್ಯದ 4 ಸಾವಿರ ಲೀಟರ್ ಡೀಸೆಲ್, ಪೆಟ್ರೋಲ್ ಬ್ಯಾರಲ್‌ಗೆ ಸಪ್ಲಾಯ್ ಆಗಿದ್ದು ಇದು ಉದ್ದೇಶಪೂರಕವಾಗಿ ಆಗಿರುವ ಘಟನೆಯಲ್ಲ. ಕಣ್ತಪ್ಪಿನಿಂದ ಈ ಅವಘಡ ಸಂಭವಿಸಿದ್ದು, ಪೆಟ್ರೋಲ್ ಎಂದು ಭಾವಿಸಿ ಸುಮಾರು 20 ಲೀ. ಡೀಸೆಲ್ ಬೈಕ್‌ಗಳಿಗೆ ತುಂಬಿದ್ದಾರೆ ಎಂದು ಹೇಳಿದರು.ಕಂದಾಯ ಇಲಾಖೆಯ ಗಿರೀಶ್ ಮಾತನಾಡಿ, ಇಲ್ಲಿನ ಖಾಸಗಿ ಬಂಕ್‌ನಲ್ಲಿ ಕಣ್ತಪ್ಪಿನಿಂದ ಪೆಟ್ರೋಲ್ ಬ್ಯಾರಲ್‌ಗೆ ಡೀಸೆಲ್ ಸಪ್ಲೆಯಾಗಿದ್ದು, ತಹಸೀಲ್ದಾರ್ ಅವರ ಆದೇಶದ ಮೇರೆಗೆ ಹೊರತೆಗೆದಿದ್ದಾರೆ. ಇದಕ್ಕೆ ಯಾರು ಹೊಣೆಗಾರರಲ್ಲ, ಬಂಕ್‌ನಲ್ಲಿದ್ದ ಡೀಸೆಲ್ ವಾಪಸ್ಸು ತೆಗೆದಿದ್ದು ಸ್ವಚ್ಚತೆಗೊಳಿಸಿ ಮತ್ತೆ ಪೆಟ್ರೋಲ್ ತುಂಬಲಾಗಿದೆ. ಮತ್ತೆ ಪರಿಶೀಲನೆ ನಡೆಸಿದ ಬಳಿಕ ಸೀಜ್ ತೆರವುಗೊಳಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.