ಸಾರಾಂಶ
ಬೈಲಹೊಂಗಲ: ತಾಲೂಕಿನ ವಕ್ಕುಂದ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ವಕ್ಕುಂದ ಗ್ರಾಮದ ಆಕಾಶ ಚಂದ್ರಪ್ಪ ಭದ್ರಶೆಟ್ಟಿ (17) ಮೃತ ಯುವಕ. ಬುಧವಾರ ಬೆಳಗ್ಗೆ ನದಿಯಿಂದ ಮೃತ ದೇಹ ತೆಗೆಯಲಾಗಿದೆ. ಮೃತ ದೇಹ ಪತ್ತೆ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಗುರುರಾಜ ಕಲಬುರ್ಗಿ, ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಶಿವಾಜಿ ಕೊರವಿ, ಶಕೀಲ ಸನದಿ, ನಾಗರಾಜ ಹುದ್ದಾರ, ಶಿವಾನಂದ ಸೋಮನ್ನವರ, ಮಹಾಂತೇಶ ಸಂಗೊಳ್ಳಿ, ಮದಕಟ್ಟಿ, ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಮೀನುಗಾರರು ಪಾಲ್ಗೊಂಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದ್ವಿಚಕ್ರ ವಾಹನದಲ್ಲಿದ್ದ ಹಣ ಕಳ್ಳತನ:ಬೆಳಗಾವಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ₹1.40 ಲಕ್ಷ ಹಾಡಹಗಲೇ ಕಳ್ಳತನ ಮಾಡಿದ ಘಟನೆ ಬುಧವಾರ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾನಾಪುರ ತಾಲೂಕಿನ ಲೋಂಡಾದ ಮಾರುತಿಗಲ್ಲಿ ನಿವಾಸಿ ರಾಜು ವಿಕ್ಟರ್ ಡಿಕೊಸ್ಟಾ ಎಂಬುವರಿಗೆ ಹಣ ಸೇರಿತ್ತು. ಇವರು ವ್ಯಾಪಾರಕ್ಕಾಗಿ ದ್ವಿಚಕ್ರ ವಾಹನದಲ್ಲಿ ಹಣ ತಂದಿದ್ದರು. ಎಪಿಎಂಸಿಯ ರಾಜ ದೀಪ್ ಟ್ರೇಡರ್ಸ್ ಅಂಗಡಿ ಎದುರು ಬೈಕ್ ನಿಲ್ಲಿಸಿದ್ದ ವೇಳೆ ಕಳ್ಳತನ ನಡೆದಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.