ಅವ್ಯವಸ್ಥಿತ ಜೀವನ ಅನಾರೋಗ್ಯಕ್ಕೆ ಆಹ್ವಾನ

| Published : Sep 08 2025, 01:00 AM IST

ಸಾರಾಂಶ

ಅವ್ಯವಸ್ಥಿತ ಜೀವನದ ನಡುವೆ ಸರಿಯಾದ ಆಹಾರ ಸೇವನೆ, ನಿದ್ರೆ, ವ್ಯಾಯಾಮಕ್ಕೂ ಸಮಯ ಮೀಸಲಿಡಲಾಗುತ್ತಿಲ್ಲ. ಹೆಚ್ಚು ವೇಗವಾಗಿ ಬದುಕು ಸಾಗಬೇಕೆಂಬ ನಿರಂತರ ಒತ್ತಡದ ಹಿನ್ನೆಲೆಯಲ್ಲಿ, ಬಹುತೇಕ ಮಂದಿ ಸಾಂಪ್ರದಾಯಿಕ, ಪೌಷ್ಠಿಕ ಆಹಾರವನ್ನು ಬಿಟ್ಟು, ಸುಲಭವಾಗಿ ದೊರೆಯುವ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಇಂದಿನ ವೇಗದ ಜೀವನಶೈಲಿಯ ಪರಿಣಾಮವಾಗಿ, ಮನುಷ್ಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದತ್ತ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರೊ. ಜಗಮೋಹನ್ ಶ್ರೀವತ್ಸವ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇಂದಿನ ವೇಗದ ಜೀವನಶೈಲಿಯ ಪರಿಣಾಮವಾಗಿ, ಮನುಷ್ಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದತ್ತ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರೊ. ಜಗಮೋಹನ್ ಶ್ರೀವತ್ಸವ್ ಅಭಿಪ್ರಾಯಪಟ್ಟರು.ನಗರದ ಸುಬ್ರಹ್ಮಣ್ಯ ಬಡಾವಣೆಯಲ್ಲಿರುವ ದೀಪಾಲಿ ಧಾಮದಲ್ಲಿ, ನ್ಯೂ ಮೆಡ್ ಹೆಲ್ತ್ ಮೈಸೂರು ಹಾಗೂ ದೀಪಾಲಿ ಧಾಮ ಶಟಲ್ ಟೀಮ್ ಸಹಯೋಗದಲ್ಲಿ ಮೆಗಾ ರಕ್ತಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವ್ಯವಸ್ಥಿತ ಜೀವನದ ನಡುವೆ ಸರಿಯಾದ ಆಹಾರ ಸೇವನೆ, ನಿದ್ರೆ, ವ್ಯಾಯಾಮಕ್ಕೂ ಸಮಯ ಮೀಸಲಿಡಲಾಗುತ್ತಿಲ್ಲ. ಹೆಚ್ಚು ವೇಗವಾಗಿ ಬದುಕು ಸಾಗಬೇಕೆಂಬ ನಿರಂತರ ಒತ್ತಡದ ಹಿನ್ನೆಲೆಯಲ್ಲಿ, ಬಹುತೇಕ ಮಂದಿ ಸಾಂಪ್ರದಾಯಿಕ, ಪೌಷ್ಠಿಕ ಆಹಾರವನ್ನು ಬಿಟ್ಟು, ಸುಲಭವಾಗಿ ದೊರೆಯುವ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ.

ಈ ಆಹಾರಗಳಲ್ಲಿ ಪೌಷ್ಟಿಕಾಂಶ ಕಡಿಮೆ ಮತ್ತು ಕೊಬ್ಬು, ಉಪ್ಪು, ಸಕ್ಕರೆ ಇತ್ಯಾದಿಗಳ ಪ್ರಮಾಣ ಹೆಚ್ಚಾಗಿರುವುದರಿಂದ, ಇವು ಅನುಕೂಲಕರ ಅನುಭವವನ್ನು ಕೊಡುವುದಷ್ಟೆ ಹೊರತು, ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಇಂತಹ ಆಹಾರಗಳ ಅನಿಯಮಿತ ಸೇವನೆಯಿಂದಾಗಿ ಮನುಷ್ಯನು ತಾನೂ ತಿಳಿಯದಂತೆ ಅಧಿಕ ರಕ್ತದೊತ್ತಡ , ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ಗ್ಯಾಸ್ಟ್ರಿಕ್, ಮುಂತಾದ ಅನೇಕ ಜೀವಘಾತಕ ಕಾಯಿಲೆಗಳತ್ತ ಮನುಷ್ಯ ಆಕರ್ಷಿತನಾಗುತ್ತಿದ್ದಾನೆ. ಅಲ್ಲದೆ, ಈ ಆಹಾರಶೈಲಿಯ ಜೊತೆಗೆ ಆಲಸ್ಯ, ಚಟುವಟಿಕೆ ಕೊರತೆ, ನಿದ್ರೆ ಕೊರತೆ ಸೇರಿ ಇವು ಆರೋಗ್ಯದ ಮೇಲೆ ದ್ವಿಗುಣವಾದ ನಷ್ಟವನ್ನು ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ಒಬ್ಬ ವ್ಯಕ್ತಿಯ ದೈನಂದಿನ ಕಾರ್ಯಕ್ಷಮತೆ ಕುಸಿಯುತ್ತದೆ ಮತ್ತು ಜೀವಮಾನ ಮಟ್ಟದಲ್ಲಿಯೇ ಅನಾರೋಗ್ಯದ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.

ಪ್ರೊ. ಉಷಾ ಮಾತನಾಡುತ್ತಾ, ಅತಿ ಸುಖ ಬಯಸಿದ ಮನುಷ್ಯ ಈಗ ಶ್ರಮರಹಿತ ಜೀವನಶೈಲಿಯನ್ನೇ ಅಳವಡಿಸಿಕೊಂಡಿದ್ದಾನೆ. ಇದರಿಂದಾಗಿ ನಾನಾ ರೋಗಗಳು ವ್ಯಕ್ತಿಯ ದೈನಂದಿನ ಜೀವನಕ್ಕೆ ನುಗ್ಗುತ್ತಿವೆ. ದೀಪಾಲಿ ಧಾಮ ಶಟಲ್ ಟೀಮ್ ಇಂತಹ ಶಿಬಿರವನ್ನು ರಿಯಾಯಿತಿದರದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.ಮಾಜಿ ಯೋಧ ಅನಿಲ್ ಮಾತನಾಡಿ, ಇಂತಹ ತಪಾಸಣಾ ಶಿಬಿರಗಳು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ. ಇದರ ಸದ್ಬಳಕೆಯಾಗಬೇಕು ಎಂದು ಹೇಳಿದರು.ನ್ಯೂ ಮೆಡ್ ಹೆಲ್ತ್ ಮೈಸೂರಿನ ಪ್ರತಿನಿಧಿ ಗೋಕುಲ್ ಕೃಷ್ಣ ಮಾತನಾಡಿ, ನಮ್ಮ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರತಿಷ್ಠಿತ ಲ್ಯಾಬ್‌ಗಳನ್ನು ಹೊಂದಿದ್ದು, ಆರೋಗ್ಯ ತಪಾಸಣೆಯಲ್ಲಿ ನಿಖರತೆ ಹಾಗೂ ಸಮರ್ಥ ಸೇವೆ ನೀಡಲು ಬದ್ಧವಾಗಿದೆ. ನಮ್ಮ ಧ್ಯೇಯವೇ ಜನರ ಆರೋಗ್ಯ ಕಾಪಾಡುವುದು ಎಂದು ಹೇಳಿದರು.ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್‌ ಚಾಲನೆ ನೀಡಿದರು. ಅವರು ಸ್ವತಃ ರಕ್ತಪರೀಕ್ಷೆಗೆ ಒಳಗಾಗಿ ಮಾದರಿಯಾದರು. ಕಾರ್ಯಕ್ರಮದಲ್ಲಿ ಬಿ. ಪರಮೇಶ್, ಹೇಮಂತ್ ಕುಮಾರ್‌, ಕಿರಣ್ ಕುಮಾರ್, ನ್ಯೂ ಮೆಡ್ ಹೆಲ್ತ್‌ನ ಮಲ್ಲಿಕಾರ್ಜುನ್, ದೀಪಾಲಿ ಧಾಮ ಶಟಲ್ ಟೀಮ್‌ನ ಕೃಷ್ಣಮೂರ್ತಿ, ಸತೀಶ್, ಹರೀಶ್, ಕೇಶವಮೂರ್ತಿ, ಮಯೂರ್ ನಾಯಕ್, ಚಂದ್ರ ನಾಯಕ್, ಯಲ್ಲಪ್ಪ,ಕೆಪಿಎಸ್ ವಿಶ್ವನಾಥ್, ಡಿಜಿ ಗಿರಿ ಗೌಡ, ಶಿವು ಪಾಟೀಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.