ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
ಶುಕ್ರವಾರ ರಾತ್ರಿ ತಾಲೂಕಿನ ಗುಂಟೇನಟ್ಟಿಗೆ ಆಗಮಿಸುವ ಮೂಲಕ ಖಾನಾಪುರ ತಾಲೂಕು ಪ್ರವೇಶಿಸಿದ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ ದೊರೆಯಿತು. ಗುಂಡೇನಟ್ಟಿ, ಕೇರವಾಡ, ಮೂಕಬಸವನಗರ, ಸುರಾಪುರ, ಕಕ್ಕೇರಿ, ಲಿಂಗನಮಠ ಗ್ರಾಮಗಳಿಗೆ ಸಾಗಿದ ಜಾಥಾ ಮಧ್ಯರಾತ್ರಿ ತಾಲೂಕಿನ ಗೋಧೋಳಿ ಗ್ರಾಮಕ್ಕೆ ತೆರಳಿ ವಾಸ್ಯವ್ಯ ಹೂಡಿತು. ಶನಿವಾರ ಗೋಧೋಳಿ ಗ್ರಾಮದಿಂದ ಹೊರಟ ಜಾಥಾ ಲಿಂಗನಮಠ, ಕಕ್ಕೇರಿ, ಭೂರಣಕಿ, ಬೀಡಿ ಗ್ರಾಮ ಪಂಚಾಯತಿ ಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿತು.ಗುಂಡೇನಟ್ಟಿ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಬಾಳಪ್ಪನವರ, ಸಮಾಜ ಕಲ್ಯಾಣ ಅಧಿಕಾರಿ ವಿಶ್ವನಾಥ ನಾಗನೂರ, ಬಿಇಒ ಕಚೇರಿಯ ಶಂಕರ ಕಮ್ಮಾರ, ಕೇರವಾಡ ಗ್ರಾ.ಪಂ ಸದಸ್ಯ ವಿಠ್ಠಲ ಹಿಂಡಲಕರ, ಕೆಆರ್‌ಡಿಎಸ್‌ಎಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಹಾಗೂ ಇತರರು ಡಾ.ಅಂಬೇಡ್ಕರರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಸಂವಿಧಾನ ಜಾಗೃತಿ ಜಾಥಾ ಬರಮಾಡಿಕೊಂಡರು.
ಕೇರವಾಡ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಜಾಥಾ ಸಂಚರಿಸಿ, ಸಂವಿಧಾನದ ಕುರಿತು ಜಾಗೃತಿ ಮೂಡಿಸಿತು. ಜಗ್ಗಲಗಿ ಮೇಳ, ಕೋಲಾಟ ಮೇಳ, ಹಾಗೂ ಶಾಲಾ ವಿದ್ಯಾರ್ಥಿನಿಯರ ನೃತ್ಯ ತಂಡ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಜಾಥಾಗೆ ಕಳೆತಂದವು.ಶನಿವಾರ ಇಡೀ ದಿನ ಲಿಂಗನಮಠ, ಗೋಧೋಳಿ, ಕಕ್ಕೇರಿ, ಭೂರಣಕಿ, ಬೀಡಿ, ಗಂದಿಗವಾಡ, ಮಂಗೇನಕೊಪ್ಪ, ಇಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿತು. ಈ ವೇಳೆ ತಾಲೂಕು ಪಂಚಾಯತಿ, ತಹಸೀಲ್ದಾರ್ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ, ಗ್ರಾಮ ಪಂಚಾಯತಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ವ್ಯಾಪ್ತಿಯ ಮುಖಂಡರು, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಜಾಥಾದ ಯಶಸ್ಸಿಗೆ ಶ್ರಮಿಸಿದರು.