ಮತಕ್ಷೇತ್ರಕ್ಕೊಂದು ಪ್ರತ್ಯೇಕ ಪ್ರಣಾಳಿಕೆ

| Published : Mar 31 2024, 02:06 AM IST

ಮತಕ್ಷೇತ್ರಕ್ಕೊಂದು ಪ್ರತ್ಯೇಕ ಪ್ರಣಾಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅವಧಿಯ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬಡವರು, ರೈತರು ಕಂಗಾಲಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದು, ಬಡವರಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದೆಲ್ಲವನ್ನು ಈಡೇರಿಸುವ ದೇಶದ ಏಕೈಕ ಪಕ್ಷ ಕಾಂಗ್ರೆಸ್‌. ಪ್ರಸಕ್ತ ಲೋಕಸಭಾ ಚುನಾವಣೆಗಾಗಿ ಕ್ಷೇತ್ರದ ಎಲ್ಲ ಭಾಗಗಳ ಅವಶ್ಯಕತೆಗನುಸಾರ ಪ್ರೆತ್ಯೇಕ ಪ್ರಣಾಳಿಕೆ ರಚಿಸಲಾಗುವುದು ಎಂದು ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಚಿಮ್ಮಡಗ್ರಾಮದ ಉಮೇಶ ಪೂಜಾರಿಯವರ ತೋಟದ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಮ್ಮ ತಂದೆಯವರ ಸರಳತೆಗೆ ವರಿಷ್ಠರು ನನಗೆ ತಮ್ಮ ಸೇವೆ ಮಾಡವ ಈ ಜವಾಬ್ದಾರಿ ನೀಡಿದ್ದಾರೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ರಾಜ್ಯ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ. ಕಾರ್ಯಕರ್ತರು ಬೂತ ಮಟ್ಟದಲ್ಲಿ ಶ್ರಮಿಸಿದರೆ ಈ ಬಾರಿ ಅತೀ ಹೆಚ್ಚು ಅಂತರದ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಬಿಜೆಪಿ ಅವಧಿಯ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬಡವರು, ರೈತರು ಕಂಗಾಲಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದು, ಬಡವರಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ಈ ಕಾರ್ಪೊರೆಟ್‌ ಆಡಳಿತದ ಬಿಜೆಪಿ ಪಕ್ಷವನ್ನು ಸೋಲಿಸಬೇಕಿದೆ ಎಂದು ಹೇಳಿದರು.

ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷಣ ದೇಸಾರಟ್ಟಿ, ಸತ್ಯಜಿತ ಪಾಟೀಲ, ಶಿವಕುಮಾರ, ಸಿದ್ದು ಸಾಂಗ್ಲೀಲಿಕರ, ಅಶೋಕ ಧಡೂತಿ, ವಿಠ್ಠಲ ಹೊಸಮನಿ, ಪ್ರವೀಣ ಪೂಜಾರಿ ಸಿದ್ದಲಿಂಗ ಹಳಮನಿ, ರವಿ ದೊಡವಾಡ, ಅಡಿವೆಪ್ಪ ಪಾಟೀಲ, ಪರಪ್ಪಾ ಉರಭಿನವರ ಸೇರಿದಂತೆ ಹಲವರು ಇದ್ದರು.