ಸಾರಾಂಶ
ಜನರ ಸೇವೆ ಮಾಡುವ ಮತ್ತು ಸರ್ವ ಸಮಾಜಗಳನ್ನು ಸಂಘಟಿಸಿ ಬಡವರ ದೀನ ದಲಿತರ ಹಿಂದುಳಿದ ವರ್ಗದವರ ಅವಕಾಶ ವಂಚಿತರ ದ್ವನಿ ಇಲ್ಲದೆ ಸಾಮಾನ್ಯ ಜನರ ಸಮಸ್ಯೆಗಳನ್ನು ಸಾಮಾನ್ಯ ಕಾರ್ಯಕರ್ತನಾಗಿ ಸೇವಕನಾಗಿ ಪ್ರತಿಯೊಂದು ಮನೆಯ ಮಗನಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಧಾನ ಸೇವಕರಾದ ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತಿಯ ಜನತಾ ಪಾರ್ಟಿಯ ವತಿಯಿಂದ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದು ಬಬಲೇಶ್ವರದ ಜನಸೇವಾ ಫೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ನಾಗರಾಜ ಭೋವಿ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಸರಿ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪ್ರವಾಸೋದ್ಯಮ, ಕೈಗಾರಿಕೆ ಸೇವಾ ವಲಯ ಈ ರೀತಿ ಹತ್ತು ಹಲವು ಕ್ಷೇತ್ರಗಳಲ್ಲಿ ಪರಿವರ್ತನೆ ತರಲು ಪ್ರಗತಿಯ ಪರ್ವಕಾಲ ಪಾರಂಭಿಸಬೇಕಿದೆ. ಪ್ರಗತಿಶೀಲ ಜಿಲ್ಲೆಯಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಮುಖ ೨೪ ಅಂಶಗಳನ್ನು ಒಳಗೊಂಡ ಕೇಸರಿ ಗ್ಯಾರಂಟಿ ಕಾರ್ಡ್ ಹಾಗೂ ಯೂತ್ ವಿಜನ್ ವಿಜಯಪುರ-೨೦೨೪ ಈ ಮೂಲಕ ಪರಿವರ್ತನೆ ಮಾಡುವ ಜವಾಬ್ದಾರಿ ಮೇಲಿದೆ ಎಂದರು.
ಜನರ ಸೇವೆ ಮಾಡುವ ಮತ್ತು ಸರ್ವ ಸಮಾಜಗಳನ್ನು ಸಂಘಟಿಸಿ ಬಡವರ ದೀನ ದಲಿತರ ಹಿಂದುಳಿದ ವರ್ಗದವರ ಅವಕಾಶ ವಂಚಿತರ ದ್ವನಿ ಇಲ್ಲದೆ ಸಾಮಾನ್ಯ ಜನರ ಸಮಸ್ಯೆಗಳನ್ನು ಸಾಮಾನ್ಯ ಕಾರ್ಯಕರ್ತನಾಗಿ ಸೇವಕನಾಗಿ ಪ್ರತಿಯೊಂದು ಮನೆಯ ಮಗನಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರುಶರಾಮ ಹಾವಡಿ, ರಾಮನಗೌಡ ಬಿರಾದಾರ, ಸಂತೋಷ ಕೊಕಟನೂರ ಸೇರಿದಂತೆ ಮುಂತಾದವರು ಇದ್ದರು.