ಭೂತಮ್ಮನ ಬೆಟ್ಟದಲ್ಲಿ ಬೆಳಗುವ ಜ್ಯೋತಿ

| Published : Apr 09 2024, 12:52 AM IST / Updated: Apr 09 2024, 11:15 AM IST

ಸಾರಾಂಶ

ಭೂತಮ್ಮನ ಬೆಟ್ಟದ ಹಂಚಿನಲ್ಲಿ ಭೂತಮ್ಮನ ಗುಡ್ಡವಿದ್ದು ಭೂಮಿ ಮಟ್ಟದಿಂದ ಬಂಡೆ ಕಲ್ಲುಗಳನ್ನು ಏರಿ ಸುಮಾರು 15 ಕಿ ಮೀ ಮೇಲೆ ಕ್ರಮಿಸಿ ಅಲ್ಲಿರುವ ಭೂತಮ್ಮನ ಗುಡ್ಡದಲ್ಲಿ ದ್ವೀಪ ಹಚ್ಚಲಾಗುತ್ತದೆ. ಹಬ್ಬದ ಸಂಜೆ ಹಚ್ಚಿದರೆ ಈ ದೀಪ ಮಾರನೇ ದಿನದವರೆಗೂ ಪ್ರಕಾಶಮಾನವಾಗಿ ಉರಿಯುತ್ತದೆ.

 ಟೇಕಲ್ಟೇಕಲ್‌ :  ಕೆ ಜಿ ಹಳ್ಳಿ ಗ್ರಾಪಂ ವ್ಯಾಪ್ತಿಯ ಉಳ್ಳೇರಹಳ್ಳಿ ಭೂತಮ್ಮನ ಬೆಟ್ಟದಲ್ಲಿ ಅತೀ ವಿಶೇಷವಾಗಿ ಪುರತಾನ ಕಾಲದಿಂದ ಪ್ರತಿ ವರ್ಷ ಯುಗಾದಿ ಹಬ್ಬದಂದು ಸಂಜೆ ವಿಶೇಷವಾದ ಅಖಂಡ ದೀಪ (ಜ್ಯೋತಿ) ಹಚ್ಚುವುದು ನೂರಾರು ವರ್ಷದಿಂದ ಪ್ರತೀತಿಯಲ್ಲಿದೆ. ಭೂತಮ್ಮನ ಬೆಟ್ಟದ ಹಂಚಿನಲ್ಲಿ ಭೂತಮ್ಮನ ಗುಡ್ಡವಿದ್ದು ಭೂಮಿ ಮಟ್ಟದಿಂದ ಬಂಡೆ ಕಲ್ಲುಗಳನ್ನು ಏರಿ ಸುಮಾರು 15 ಕಿ ಮೀ ಮೇಲೆ ಕ್ರಮಿಸಿ ಅಲ್ಲಿರುವ ಭೂತಮ್ಮನ ಗುಡ್ಡದಲ್ಲಿ ದ್ವೀಪ ಹಚ್ಚಲಾಗುತ್ತದೆ. 

ಹಬ್ಬದ ಸಂಜೆ ಹಚ್ಚಿದರೆ ಈ ದೀಪ ಮಾರನೇ ದಿನದವರೆಗೂ ಪ್ರಕಾಶಮಾನವಾಗಿ ಉರಿಯುತ್ತದೆ. ಬೆಟ್ಟದ ಆಸುಪಾಸಿನ ಗ್ರಾಮದವರು ಅಂದು ಹಬ್ಬ ಆಚರಣೆ ನಂತರ ರಾತ್ರಿ ಭೂತಮ್ಮನ ದೀಪ ನೋಡಿ ನಮಸ್ಕಾರ ಮಾಡಿ ಬರುವುದು ಪರಂಪರೆಯ ವಾಡಿಕೆಯಾಗಿದೆ.150 ಗ್ರಾಮಗಳಿಗೆ ಕಾಣು ದೀಪ:ಈ ದೀಪವು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್, ಮಾಸ್ತಿ, ಬೂದಿಕೋಟೆ, ತಮಿಳುನಾಡಿನ ಹೊಸೂರು, ಬೇರಿಕೆ ಇನ್ನು ಕರ್ನಾಟಕ ತಮಿಳುನಾಡಿನ ೧೫೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಲ್ಲರಿಗೂ ಕಾಣಸಿಗುತ್ತದೆ. ಎಲ್ಲರಿಗೂ ಯುಗಾದಿ ಹಬ್ದದಂದು ಭಕ್ತಿಬಾವದಿಮದ ಬೆಟ್ಟದಂಚಿನಲ್ಲಿ ಉರಿಯುತ್ತಿರುವ ದೀಪಕ್ಕೆ ನಮಸ್ಕರಿಸುತ್ತಾರೆ.ದೀಪಕ್ಕೆ ೫೦ ಕೆ ಜಿ ಎಣ್ಣೆ:

ಭೂತಮ್ಮನ ಬೆಟ್ಟದ ಮೇಲೆ ದೀಪ ಹಚ್ಚುವುದು ಉಳ್ಳೇರಹಳ್ಳಿ ನಾಯಕ ಜನಾಂಗದವರು. ಪುರಾತನ ಕಾಲದಿಂದ ಈ ಕಾರ್ಯವನ್ನು ಗ್ರಾಮಸ್ಥರೊಡನೆ ಸೇರಿ ಹಚ್ಚುತ್ತಾರೆ. ದೀಪ ಹಚ್ಚಲು ಮೊದಲಿಗೆ ಪಕ್ಕದ ಜಂಗಾನಹಳ್ಳಿ ಗ್ರಾಮದಿಂದ ದೊಡ್ಡ ಮಣ್ಣಿನ ಮಡಿಕೆ ತರುತ್ತಾರೆ. ಉಳ್ಳೇರಹಳ್ಳಿ ಗ್ರಾಮದಿಂದ ಬಿಳಿ ಬಟ್ಟೆ ಅಂದರೆ ಹತ್ತಿ ಬಟ್ಟೆಯಿಂದ ಮುಕ್ಕಾಲು ಅಡಿ ಗಾತ್ರದ ಎರಡುವರೆ ಅಡಿ ಬೃಹತ್ ಗಾತ್ರದ ಉದ್ದದ ಬತ್ತಿಯನ್ನು ಮಾಡಲಾಗುತ್ತದೆ. ಗ್ರಾಮದವರು, ಅಂದು ಜಾತ್ರೆಗೆ ಬರುವ ಭಕ್ತಾಧಿಗಳು, ಹರಿಕೆ ಹೊತ್ತವರು ಹಾಗೂ ಕೆ.ಜಿ.ಹಳ್ಳಿ ಗ್ರಾ ಪಂ. ವ್ಯಾಪ್ತಿಯಿಂದ ನೀಡಿದಂತ ಸುಮಾರು ೫೦ ಕೆಜಿಯಷ್ಟು ಎಣ್ಣೆ ಹರಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ಭಕ್ತಿ ಭಾವದಿಂದ ಬತ್ತಿ ಇಟ್ಟು ಪೂಜೆ ಮಾಡಿ ಸಂಜೆ ಸುಮಾರು ೬.೩೦ಕ್ಕೆ ಭೂತಮ್ಮನ ದೀಪ ಹಚ್ಚಲಾಗುತ್ತದೆ.