ಉದ್ಘಾಟನೆಗೊಂಡರೂ ಬಳಕೆಗೆ ಬಾರದ ಶೌಚಾಲಯ

| Published : Jan 16 2024, 01:49 AM IST

ಸಾರಾಂಶ

೨ ಲಕ್ಷ ರುಪಾಯಿ ವೆಚ್ಚದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿ, ಅದ್ದೂರಿಯಾಗಿ ಉದ್ಘಾಟನೆ ಮಾಡಿದರು, ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆದರೂ ಶೌಚಾಲಯದ ಬಾಗಿಲನ್ನೇ ತೆರೆದಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಸಮುದಾಯ ಶೌಚಾಲಯ ಉದ್ಘಾಟನೆಗೊಂಡು ವರ್ಷಗಳೇ ಕಳೆದರು ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಕೇಂದ್ರ ಸರ್ಕಾರದ ಯೋಜನೆಯು ನಿರುಪ್ತವಾಗಿದೆ.

ಕೋಲಾರ ತಾಲೂಕಿನ ಹೋನ್ನೇನಹಳ್ಳಿ ಬಸ್ ನಿಲ್ದಾಣದ ಸಮೀಪ ಸ್ವಚ್ಛ ಭಾರತ್ ಅಭಿಯಾನದಡಿ ೨ ಲಕ್ಷ ರುಪಾಯಿ ವೆಚ್ಚದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿ, ಅದ್ದೂರಿಯಾಗಿ ಉದ್ಘಾಟನೆ ಮಾಡಿದರು, ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆದರೂ ಒಂದು ದಿನವೂ ಸಹ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ದುಸ್ಥಿತಿಗೆ ತಲುಪಿದೆ.

ನೀರಿನ ಟ್ಯಾಂಕ್‌ ಅಳ‍ಡಿಸಿಲ್ಲ

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸಮುದಾಯ ಶೌಚಾಲಯದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ನಿರ್ವವಣೆ ಇಲ್ಲದೆ, ನೂತನ ಕಟ್ಟಡ ಹಾಳು ಮಾಡಿದ್ದಾರೆ, ಸಮುದಾಯ ಶೌಚಾಲಯಕ್ಕೆ ನೀರಿನ ಟ್ಯಾಂಕ್ ಅಳವಡಿಸದೇ ಬರೀ ಪೈಪ್‌ಲೈನ್ ಅಳವಡಿಸಿ ಉದ್ಘಾಟನೆ ಮಾಡಿದ ಅಧಿಕಾರಿಗಳು ಇದೀಗ ನಿರ್ವಹಣೆ ಮಾಡುವುದೇಗೆ ಎನ್ನುವ ಚಿಂತೆಯಲ್ಲಿದ್ದಾರೆ.

ಸಮುದಾಯ ಶೌಚಾಲಯ ಸಾರ್ವಜನಿಕರ ಬಳಕೆಗೆ ಬಾರದೆ ಇರುವ ಕಾರಣ ಸಮುದಾಯ ಶೌಚಾಲಯದ ಸುತ್ತಲೂ ಗಿಡಗಂಟಿ ಬೆಳೆದು, ವಿಷ ಜಂತುಗಳಾದ ಹಾವು, ಚೇಳುಗಳ ಅವಾಸಸ್ಥಾನವಾಗಿದೆ ಇದರ ಜೊತೆಗೆ ಮಧ್ಯದ ಬಾಟಲಿಗಳು ಕಸ ಕಡ್ಡಿ ಸೇರಿ ತಿಪ್ಪೆಗುಂಡಿಯಂತಾಗಿದೆ, ಸಮರ್ಪಕವಾಗಿ ನಿರ್ವಹಿಸದೇ ಇರುವ ಕಾರಣಕ್ಕೆ ಸಮುದಾಯ ಶೌಚಾಲಯ ಸಾರ್ವಜನಿಕರ ಉಪಯೋಗಿಸಲು ಯೋಗ್ಯವಲ್ಲದ ರೀತಿಯಲ್ಲಿ ಅವ್ಯವಸ್ಥೆಗೆ ತಲುಪಿದೆ.ಸಮುದಾಯದ ಸಹಭಾಗಿತ್ವ ಬೇಕು

ಸಮುದಾಯದ ಸಹಭಾಗಿತ್ವವಿಲ್ಲದೆ ಸ್ವಚ್ಛತೆಯಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯವೇ ಇಲ್ಲ, ಇದಕ್ಕೆ ಅಧಿಕಾರಿಗಳ ಪಾತ್ರವು ಸಹ ಬಹು ಮುಖ್ಯವಾದದ್ದು, ನೈರ್ಮಲ್ಯ ಹಾಗೂ ಶೌಚಾಲಯಗಳು ಇಂದು ಸಣ್ಣ ವಿಷಯಗಳಾಗಿ ಉಳಿದಿಲ್ಲ, ಇದರಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಹೆಚ್ಚಿನ ಮನ್ನಣೆ ಹಾಗೂ ಮಹತ್ವ ನೀಡಲಾಗುತ್ತಿದೆ.

ಸ್ವಚ್ಛತೆ ಎನ್ನುವುದು ರಾಷ್ಟ್ರವೊಂದರ ಅಭಿವೃದ್ಧಿಯ ದುಕೃತ್ಯಕವೂ ಹಾಗಿರುತ್ತದೇ ಹೀಗಿದ್ದರೂ ಪಂಚಾಯಿತಿ ಅಧಿಕಾರಿಗಳು ಶೌಚಾಲಯದ ಮಹತ್ವ ಸ್ವಚ್ಚತೆಯ ಮಹತ್ವ ಅರಿಯದೇ ಅಭಿವೃದ್ದಿ ಹಾಗೂ ಸ್ವಚ್ಚತೆ ಹೆಸರಲ್ಲಿ ಅನುದಾನಗಳನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಕೋಟ್..............ಸಮುದಾಯ ಶೌಚಾಲಯಕ್ಕೆ ನೀರಿನ ಟ್ಯಾಂಕ್ ಅಳವಡಿಸಬೇಕು, ಕೆಲವೊಂದು ಸಮಸ್ಯೆಗಳಿವೆ, ನಾನು ಅಧಿಕಾರ ವಹಿಸಿಕೊಳ್ಳುವ ಮೊದಲೇ ಸಮುದಾಯ ಶೌಚಾಲಯ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದಾರೆ, ನಾನು ಇಲ್ಲಿಗೆ ಬಂದು ಒಂದುವರೆ ವರ್ಷ ಹಾಗಿದೆ, ಇದರ ಈ ಬಗ್ಗೆ ಗಮನ ಹರಿಸುತ್ತೇನೆ.- ಹರೀಶ್, ಹೊನ್ನೇನಹಳ್ಳಿ ಗ್ರಾ.ಪಂ ಪಿಡಿಓ.

೧೫ಕೆಎಲ್‌ಆರ್-೧.....................ಕೋಲಾರ ತಾಲೂಕಿನ ಹೋನ್ನೇನಹಳ್ಳಿ ಬಸ್ ನಿಲ್ದಾಣದ ಸಮೀಪ ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಾಣಗೊಂಡಿರುವ ಸಮುದಾಯ ಶೌಚಾಲಯದ ಕಟ್ಟಡ.