ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಹೊರವಲಯದಲ್ಲಿರುವ ಚಾಮಡಿಹಳ್ಳಿ ಗೇಟ್‌ನಲ್ಲಿರುವ ಆಯುಷ್ ಆಸ್ಪತ್ರೆ ಪಟ್ಟಣಕ್ಕೆ ದೂರವಿದ್ದು, ಜನರು ಚಿಕಿತ್ಸೆಗಾಗಿ ಅಲ್ಲಿಗೆ ತೆರಳಲು ತೊಂದರೆ ಆಗುತಿದ್ದ ಕಾರಣ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವಿಭಾಗವನ್ನು ತೆರೆಯಲಾಗಿದೆ, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉನ್ನತೀಕರಿಸಿದ ಆಯುಷ್ ಚಿಕಿತ್ಸಾ ವಿಭಾಗದ ಕಚೇರಿ ಉದ್ಘಾಟನೆ ಮತ್ತು ಆರೋಗ್ಯ ರಕ್ಷಾ ಸಮಿತಿಯ ನೂತನ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ೮೦೦ ಹೊರರೋಗಿಗಳು ತಪಾಸಣೆಗೆ ಒಳಪಡುತ್ತಿದ್ದಾರೆ. ಇದೀಗ ತೆರೆಯಲಾಗಿರುವ ಆಯುಷ್ ವಿಭಾಗದಿಂದ ಪ್ರತಿದಿನ ೧೦೦ ಜನ ಚಿಕಿತ್ಸೆ ಔಷಧಿ ಪಡೆದುಕೊಳ್ಳಲು ಅನುಕೂಲವಾಗಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಥೆರಪಿಗಳನ್ನು ಆರಂಭಿಸಲಾಗುವುದು. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಂತ ಹಂತವಾಗಿ ವಾರ್ಡ್‌ಗಳ ನಿರ್ಮಾಣಕ್ಕೆ ಆದ್ಯತೆ, ಮೀಟಿಂಗ್ ಹಾಲ್, ಟಿಹೆಚ್ ಕಚೇರಿಯ ಅವಕಾಶ ಮಾಡಿಕೊಳ್ಳಲಾಗಿದೆ, ಆಸ್ಪತ್ರೆಯಲ್ಲಿ ಸಂಗ್ರಹಿಸಿರುವ ಮೂರು ಕೋಟಿ ರೂ ಹಣದಲ್ಲಿ ಆಸ್ಪತ್ರೆಗಾಗಿ ಅಗತ್ಯ ಪರಿಕರಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಶ್ರೀಮತಿ ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ತಾಲೂಕು ವೈದ್ಯಾಧಿಕಾರಿ ಡಾ.ವಿ.ಮಹೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಜಿ. ಕೆ. ಮಂಜುನಾಥ್, ದಿಲೀಪ್ ಮೋಹನ್, ಶಾಮಲಾ ಉದಯ ಕುಮಾರ್, ವಿನಯ್, ಶಂಕರ್, ವೆಂಕಟೇಶ್, ಆಯುಷ್ ವೈದ್ಯರಾದ ಡಾ. ರವಿ, ಡಾ, ಶುಭ, ಸೇರಿದಂತೆ ಇತರರು ಹಾಜರಿದ್ದರು.