ಸಾರಾಂಶ
ಕನ್ನಡಪ್ರಭ ವಾರ್ತೆ ಬೇತಮಂಗಲಹೋಬಳಿಯ ಗುಟ್ಟಹಳ್ಳಿ, ಬಂಗಾರು ತಿರುಪತಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ೫ ಕೋಟಿ ರು.ಗಳ ಅನುದಾನದಡಿಯಲ್ಲಿ ಕಾಲೇಜು ಅವರಣದಲಿ ನೂತನ ಕಟ್ಟಡಗಳ ನಿರ್ಮಾಣ ಭೂಮಿ ಪೂಜೆ ಶಾಸಕಿ ಎಂ.ರೂಪಕಲಾ ಶಶಿಧರ್ ನೇರವೇರಿಸಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಭವಿಶ್ಯ ರೂಪಿಸುವಲ್ಲಿ ಗುಟ್ಟಹಳ್ಳಿ ಕಾಲೇಜಿನ ಏಲ್ಲಾ ಸಿಬ್ಬಂದಿಯವರು ಶ್ರಮವಹಿಸುತ್ತಿರುವುದು ಪ್ರಶಂಸನೀಯ ಶಾಸಕರು ತಿಳಿಸಿದರು.ಕಾಲೇಜಿಗೆ ನ್ಯಾಕ್ ಪ್ರಶಂಸೆ
ಕಾಲೇಜಿನ ಮೌಲ್ಯಮಾಪನ ಮಾಡುವ ನ್ಯಾಕ್ ಸಮಿತಿಯು ಕಾಲೇಜಿಗೆ ಉತ್ತಮ ಗ್ರೇಡ್ ನೀಡಿದ್ದ ಕಾರಣ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ರೂ.೫.೦೦ ಕೋಟಿ ಅನುದಾನ ಬಿಡುಗಡೆಯಾಗಿದೆ, ರಾಜ್ಯ ಸರ್ಕಾರದ ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನದಡಿ ರೂ.೨.೦೦ ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದರು.ಈ ಅನುದಾನದಲ್ಲಿ ಆಧುನಿಕ ಶೈಲಿಯ ಸೆಮಿನಾರ್ ಹಾಲ್, ಬೋಧನಾ ಕೊಠಡಿಗಳು ಹಾಗೂ ಇನ್ನಿತರೆ ಹಲವು ಆಧುನಿಕ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ರಾಜ್ಯ ಸರ್ಕಾರದ ಎಸ್.ಸಿ.ಪಿ.ಹಾಗೂ ಟಿ.ಎಸ್.ಪಿ. ಅನುದಾನದ ರೂ.೨.೦೦ ಕೋಟಿಯಲ್ಲಿ ೦೪ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಭವಿಷ್ಯ ರೂಪಿಸಿಕೊಳ್ಳಬೇಕುನೆರೆದಿದ್ದ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳನ್ನು ತಿಳಿಸುತ್ತಾ, ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದ ಜೀವನ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸುಕೊಳ್ಳುವಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಗ್ರಾಪಂ ಅಧ್ಯಕ್ಷರಾದ ಸೊನ್ನಮ್ಮ ರಮೇಶ್, ವಿನೂ ಕಾರ್ತಿಕ್, ಮಹದೇವಪುರ ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀ ನಾರಾಯಣ, ಇನಾಯತ್ ವುಲ್ಲಾ, ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ನಾಗರಾಜ್, ಮುಖಂಡರಾದ ಭಾರ್ಗವರಾಮ್, ಚಂದ್ರ ಕಾಂತ್, ನಂಜುಂಡ ಗೌಡ, ಸುರೇಂದ್ರ ಗೌಡ, ದುರ್ಗಾ ಪ್ರಸಾದ್, ನಂಜುಂಡೇಗೌಡ, ಮುನಿಸ್ವಾಮಿ ರೆಡ್ಡಿ, ಬೌಂಡ್ರಿ ಸುರೇಶ್, ವೆಂಕಟಾಚಲಪತಿ, ಚೆನ್ನಕೇಶವ ರೆಡ್ಡಿ, ವೇಣುಗೋಪಾಲ್, ಜಯರಾಮ್ ರೆಡ್ಡಿ, ಪಿ.ಟಿ.ವೆಂಕಟರಮಣ ಇದ್ದರು.
;Resize=(128,128))
;Resize=(128,128))
;Resize=(128,128))