ಸಾರಾಂಶ
ಬೆಟ್ಟಳ್ಳಿ ಮಾರಮ್ಮನ ಅಗ್ನಿಕೊಂಡೋತ್ಸವ
ಅಗ್ನಿಕುಂಡವನ್ನು ಬರಿಗೈಯಲ್ಲಿ ಎತ್ತುವ ಪ್ರಧಾನ ಅರ್ಚಕರು । ಕಳೆದ ನಾಲ್ಕು ದಿನಗಳಿಂದ ನಡೆದ ಜಾತ್ರೆ ಇಂದು ಸಂಪನ್ನ
ಕನ್ನಡಪ್ರಭ ವಾರ್ತೆ ಹನೂರುಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾಗರ ದೇವಾಲಯಕ್ಕೆ ಸಮರ್ಪಣೆ ಮತ್ತು ಮೊದಲ ಬಾರಿ ರಥೋತ್ಸವ ತಂಪು ಜ್ಯೋತಿ ಹಾಗೂ,ದೊಡ್ಡ ಬಾಯಿ ಬೀಗ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳ ಜೊತೆ ನಾಲ್ಕನೇ ದಿನ ಅಗ್ನಿಕೊಂಡೋತ್ಸವ ಸಂಭ್ರಮ ಸಡಗರದೊಂದಿಗೆ ನಡೆಯಿತು.
ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಪ್ರಧಾನ ಅರ್ಚಕರು ರಾಜೋಜಿ ರಾವ್ ಬೆಳಗಿನ ಜಾವ ಗುರುವಾರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಜ್ಜನ ಬಾವಿಗೆ ತೆರಳಿ ಪೂಜೆ ಸಲ್ಲಿಸಿ ಬರುವ ವೇಳೆ ಹರಕೆ ಹೊತ್ತ ಭಕ್ತರು ದೇವಿ ಬರುವ ದಾರಿಯಲ್ಲಿ ಮಲಗಿ ಇಷ್ಟಾರ್ಥ ಸಿದ್ಧಿಸುವಂತೆ ಮತ್ತು ರೋಗ ರುಜಿನಗಳು ಬರದಂತೆ ನಿವೇದನೆ ಮಾಡಿಕೊಂಡು ಮಲಗುವ ಭಕ್ತರನ್ನು ದಾಟಿಕೊಂಡು ದೇವಾಲಯಕ್ಕೆ ಬಂದು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ನೇರವೇರಿಸಿದರು.ಪ್ರಾಂತ್ಯಕಾಲ ಅಗ್ನಿಕೊಂಡೋತ್ಸವ:
ಗುರುವಾರ ಬೆಳಿಗ್ಗೆ ಪ್ರಾಂತ್ಯಕಾಲ ದೇವಾಲಯದ ಮುಂಭಾಗ ಮಾರಮ್ಮನ ಪತಿದೇವರು ಎಂದೇ ಹೇಳುವ ಕಂಬದ ಮೇಲೆ ಕಳೆದ ಒಂದು ವಾರದಿಂದ ಮಣ್ಣಿನ ಮಡಿಕೆಯಲ್ಲಿ ಬೆಂಕಿ ಕಾದಿದ್ದ ಕುಂಡವನ್ನು ಪೂಜೆ ಸಲ್ಲಿಸಿ ಪ್ರಧಾನ ಅರ್ಚಕರು ಪ್ರಾಂತ್ಯಕಾಲದಲ್ಲಿ ಅಗ್ನಿಕುಂಡವನ್ನು ಬರಿಗೈಯಲ್ಲಿ ಎತ್ತುವ ಮೂಲಕ ನೆರೆದಿದ್ದ ಭಕ್ತರನ್ನು ಮೂಖ ಪ್ರೇಕ್ಷಕರನ್ನಾಗಿಸಿದರು. ಬಳಿಕ ದೇವಾಲಯದ ಮುಂಭಾಗ ವಿಂಜೃಭಣೆಯಿಂದ ಸಂಭ್ರಮದಿಂದ ಅಗ್ನಿಕೊಂಡೋತ್ಸವ ನಡೆಯಿತು.ದೇವಿಯ ವಾಗ್ದಾನ :
ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ವಿಶೇಷತೆಯಲ್ಲಿ ಒಂದಾಗಿರುವ ಅಗ್ನಿ ಕುಂಡವನ್ನು ತೊಡೆಯ ಮೇಲೆ ಇಟ್ಟುಕೊಂಡು ದೇವಾಲಯದ ಪ್ರಾರಂಭದಲ್ಲಿ ಪ್ರಧಾನ ಅರ್ಚಕರ ಮೇಲೆ ದೇವಿಯ ರೂಪದಲ್ಲಿ ಹೇಳುವ ವಾಗ್ದಾನ ಈ ಬಾರಿ ಮುಂಗಾರು ಮಳೆ ನಾಲಕ್ಕು ಕಡಿಮೆ ಎಂಟಾಣಿ ಬೆಳೆಯಾಗುವುದು ಮುಂಗಾರು ಮಳೆ ಎರಡು ಕಡಿಮೆ 12 ಆಣಿ ಬೆಳೆಯಾಗುವುದು ಜೊತೆಗೆ ದೇವಿಯ ನಂಬಿರುವ ಭಕ್ತರ ಹಾಗೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನತೆ ಯಾವುದೇ ರೋಗ ರು ಜನಗಳು ಬರದಂತೆ ತಡೆಗಟ್ಟುವುದಾಗಿ ದೇವಿಯು ವಾಗ್ದಾನ ನೀಡುವುದೇ ಇಲ್ಲಿನ ಪರಂಪರೆಯಾಗಿ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.ಹರಕೆ ಕಾಣಿಕೆ ಸಲ್ಲಿಕೆ : ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧಡೆಯಿಂದ ಬಂದಿದ್ದ ಭಕ್ತರು ದೇವಾಲಯದ ಮುಂಭಾಗ ಮಾರಮ್ಮನ ಪತಿ ದೇವರಿಗೆ ಉಪ್ಪು ಹಾಕುವ ಮೂಲಕ ಅಲ್ಲಿನ ಕಂಬದ ಬಳಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ದೇವಿಯನ್ನು ಪ್ರಾರ್ಥಿಸಿದರು.
ಬಿಗಿ ಬಂದೋಬಸ್ತ್ : ಬೆಟ್ಟಳ್ಳಿ ಮಾರಮ್ಮನ ಅಗ್ನಿ ಕುಂಡೋತ್ಸವ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಾವದೇ ಅಹಿತಕರ ಘಟನೆಗಳು ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.;Resize=(128,128))
;Resize=(128,128))
;Resize=(128,128))
;Resize=(128,128))