ಬ್ರಾಹ್ಮಣ ಮಹಾಸಭಾಗೆ ₹100 ಕೋಟಿ ನಿಧಿ ಸ್ಥಾಪನೆ ಗುರಿ

| Published : Apr 11 2025, 12:31 AM IST

ಬ್ರಾಹ್ಮಣ ಮಹಾಸಭಾಗೆ ₹100 ಕೋಟಿ ನಿಧಿ ಸ್ಥಾಪನೆ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ತಮ್ಮ ಪ್ರಣಾಳಿಕೆ ಪ್ರಕಾರ ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಮಾ ಸೌಲಭ್ಯ, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಹಿಂದುಳಿದ ವಿಪ್ರ ಕುಟುಂಬಗಳು ಸಾಕಷ್ಟು ಇವೆ. ಅವುಗಳ ಸಮಗ್ರ ಏಳಿಗೆಯೇ ನಮ್ಮ ಗುರಿ ಎಂದು ರಘುನಾಥ ಹೇಳಿದ್ದಾರೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ರಾಜ್ಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸಮುದಾಯದ ಅಭಿವೃದ್ಧಿ ಗುರಿ ಹೊಂದಲಾಗಿದೆಯೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್.ರಘುನಾಥ್ ತಿಳಿಸಿದರು.

ಪಟ್ಟಣದಲ್ಲಿ ವಿಪ್ರ ಬಂಧುಗಳಲ್ಲಿ ಮತಯಾಚನೆ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 10 ಸಾವಿರ ಶ್ರೀಮಂತ ಬ್ರಾಹ್ಮಣ ಕುಟುಂಬಗಳಿಂದ ತಲಾ 1 ಲಕ್ಷ ರು. ದೇಣಿಗೆ ಸ್ವೀಕರಿಸಿ ಸಮುದಾಯದ ಅಭಿವೃದ್ಧಿಗಾಗಿ ನಿಧಿ ಸ್ಥಾಪಿಸಲಾಗುವುದೆಂದು ಭರವಸೆ ನೀಡಿದರು.ಚುನಾವಣೆ ಪ್ರಣಾಳಿಕೆ:

ತಮ್ಮ ಚುನಾವಣಾ ಪ್ರಣಾಳಿಕೆ ಪ್ರಕಾರ ವಿದ್ಯಾರ್ಥಿ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಮಾ ಸೌಲಭ್ಯ, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಹಿಂದುಳಿದ ವಿಪ್ರ ಕುಟುಂಬಗಳು ಸಾಕಷ್ಟು ಇವೆ. ಅವುಗಳ ಸಮಗ್ರ ಏಳಿಗೆಯೇ ನಮ್ಮ ಗುರಿ ಎಂದು ರಘುನಾಥ ವಿವರಿಸಿದರು.ಶೈಕ್ಷಣಿಕ ಅಭಿವೃದ್ಧಿಗೆ ಒತ್ತು

ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಪ್ರಕಾಶ್ ಮಾತನಾಡಿ, ಬ್ರಾಹ್ಮಣರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ತಂಡ ಕಾರ್ಯನಿರ್ವಹಿಸಲಿದೆ. ಈ ಹಿಂದೆ ಯಾರು ಕೂಡ ಈ ರೀತಿ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಈ ಬಾರಿ ಇಡೀ ವಿಪ್ರ ಸಮಾಜ ನಮ್ಮನ್ನು ಬೆಂಬಲಿಲಿಸುವ ವಿಶ್ವಾಸವಿದೆ ಎಂದರು.ಈ ಸಂದರ್ಭದಲ್ಲಿ ಕೆ. ನಾಗಭೂಷಣರಾವ್, ಎನ್. ಶ್ರೀಕಾಂತ್, ಎ. ಎಸ್. ರವಿ, ವಿ. ಕೃಷ್ಣ, ಎಂ. ವಾಸುದೇವ ರಾವ್, ಡಿ. ವಿ. ಭಾಸ್ಕರ್, ಎಸ್. ಸತೀಶ್, ಎ.ಎಸ್. ಹರೀಶ್, ಕೆ. ಮಂಜುನಾಥ್ ಮುಂತಾದವರು ಹಾಜರಿದ್ದರು.