ಸಾರಾಂಶ
ಭಾನುವಾರ ಪರೀಕ್ಷೆ ಮುಗಿಯುತಿದ್ದಂತೆ ಅಭ್ಯರ್ಥಿಗಳು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು, ಈ ವೇಳೆ ಬಸ್, ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿತು. ನಗರ ಸಾರಿಗೆ ಹಾಗೂ ಬಿಆರ್‌ಟಿಎಸ್ ಬಸ್‌ಗಳಲ್ಲಿ ಜನ ದಟ್ಟಣೆ ಉಂಟಾದ ಪರಿಣಾಮ ಆಸನಗಳು ಸಿಗದೆ, ನಿಂತುಕೊಂಡೆ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಯಿತು.
ಹುಬ್ಬಳ್ಳಿ: ಸಿಎಆರ್ ಮತ್ತು ಡಿಎಆರ್ ನೇಮಕಾತಿಗೆ ಹು-ಧಾ ಅವಳಿ ನಗರದ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಾಂತಿಯುತವಾಗಿ ಲಿಖಿತ ಪರೀಕ್ಷೆಗಳು ನಡೆದವು.
ನಗರದ ಬಿವಿಬಿ, ಚೇತನಾ ಕಾಲೇಜು, ಪಿ.ಸಿ. ಜಾಬಿನ್ ಕಾಲೇಜು ಸೇರಿದಂತೆ ವಿವಿಧೆಡೆ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಪರೀಕ್ಷೆಗೆ ಹಾಜರಾಗಲು ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ರಾಯಚೂರು, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಿಂದ ಸಾವಿರಾರು ಪರೀಕ್ಷಾರ್ಥಿಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ನಗರದ ಬಹುತೇಕ ಲಾಡ್ಜ್‌ಗಳು ಭರ್ತಿಯಾಗಿದ್ದವು.ಪರೀಕ್ಷೆಗೆ ಹಾಜರಾಗಲು ಹಾಗೂ ಹಾಜರಾಗಿ ವಾಪಸ್ ತಮ್ಮೂರಿಗೆ ಪ್ರಯಾಣಿಸಲು ಬಸ್ ಸಿಗದೇ ಪರದಾಡುವಂತಾಯಿತು. ಸಾವಿರಾರು ಸಂಖ್ಯೆಯಲ್ಲಿ ಪರೀಕ್ಷಾರ್ಥಿಗಳು ಆಗಮಿಸಿದ ಕಾರಣಕ್ಕೆ ಅವಳಿ ನಗರದ ಬಿಆರ್‌ಟಿಎಸ್ ಹಾಗೂ ನಗರ ಸಾರಿಗೆ ಬಸ್‌ಗಳು ಭರ್ತಿಯಾಗಿಯೇ ಸಂಚರಿಸಿದವು. ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಪ್ರಮುಖ ವೃತ್ತದಲ್ಲಿ ಪರೀಕ್ಷಾರ್ಥಿಗಳ ದಟ್ಟಣೆ ಕಂಡು ಬಂದಿತು.