ಸಿಎಂ, ಡಿಸಿಎಂಗೆ ಚನ್ನರಾಜ ಹಟ್ಟಿಹೊಳಿ ಧನ್ಯವಾದ

| Published : Feb 14 2024, 02:15 AM IST

ಸಿಎಂ, ಡಿಸಿಎಂಗೆ ಚನ್ನರಾಜ ಹಟ್ಟಿಹೊಳಿ ಧನ್ಯವಾದ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಐತಿಹಾಸಿಕ ನಿರ್ಧಾರವಾಗಿದ್ದು, ಇದರಿಂದ ಕರ್ನಾಟಕ ರಾಜ್ಯದ ಹೆಸರು ವಿಶ್ವದಲ್ಲೇ ಬೆಳಗಲಿದೆ, ಜತೆಗೆ ಬಸವಣ್ಣನವರು ಕಂಡ ಕನಸು ನನಸಾಗಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ಮನಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಬೆಳಗಾವಿಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಹಾಗೂ ಎಲ್ಲ ಸಂಪುಟ ಸಚಿವರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ವಿಶ್ವಗುರು, ಜಗಜ್ಯೋತಿ ಶ್ರೀ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆ ಮಂಗಳವಾರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಕೈಗೊಂಡು, ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಶರಣ ತತ್ವ ಪಾಲನೆಗೆ ಕಟಿಬದ್ಧವಾಗಿದೆ. ಬಸವಣ್ಣನವರ ಭಾವಚಿತ್ರವನ್ನು ವಿಧಾನ ಸೌಧದಲ್ಲಿ ಅನಾವರಣ ಮಾಡಲಾಗಿದೆ. ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕು ಎಂದು ಆದೇಶಿಸಲಾಗಿದೆ ಎಂದು ಹೇಳಿದರು.

ಇದು ಐತಿಹಾಸಿಕ ನಿರ್ಧಾರವಾಗಿದ್ದು, ಇದರಿಂದ ಕರ್ನಾಟಕ ರಾಜ್ಯದ ಹೆಸರು ವಿಶ್ವದಲ್ಲೇ ಬೆಳಗಲಿದೆ, ಜತೆಗೆ ಬಸವಣ್ಣನವರು ಕಂಡ ಕನಸು ನನಸಾಗಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ಮನಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಿರಣ ಸಾಧುನವರ, ಮೋಹನ ರೆಡ್ಡಿ, ಬಸವರಾಜ ಶೇಗಾಂವಿ, ರಾಜಾಸಲೀಂ ಖಾಸೀಮನವರ ಹಾಗೂ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.