ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು

| Published : Feb 09 2024, 01:47 AM IST

ಸಾರಾಂಶ

ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಮೇಲಿದೆ. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕತೆ ಕವಿತಾ ಮಿಶ್ರಾ ಹೇಳಿದರು.ಯರಗಟ್ಟಿ ಪಟ್ಟಣದ ವೇಂಕಟೇಶ್ವರ ಶಿಕ್ಷಣ ಸಂಸ್ಥೆಯ, ಪೃಥ್ವಿ ಸೆಂಟ್ರಲ್ ಸ್ಕೂಲನಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಮೇಲಿದೆ. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಸಂಸ್ಕಾರ, ಸಂಪ್ರಾದಾಯ ನೀಡುವ ಕೆಲಸ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದರಿ ಎಂದು ಹೇಳಿದರು.

ಶ್ರೀಬನಶಂಕರಿ ಸಾವಯವ ಕೃಷಿ ಸಂಶೋಧನೆ ಮತ್ತು ಗೋವು ಸಂವರ್ಧನೆ ಕೇಂದ್ರ ಮುಖ್ಯಸ್ಥ ಶಿವಾನಂದ ದೇಸಾಯಿ ಮಾತನಾಡಿ, ಈಚೆಗೆ ದಿನಗಳಲ್ಲಿ ಶಿಕ್ಷಣ ಕೇಂದ್ರಗಳು ವ್ಯಾಪಾರೀಕರಣವಾಗಿದೆ. ಕೆಲವೇ ಕೆಲವು ಸಂಸ್ಥೆಗಳಲ್ಲಿ ಗುಣಮಟ್ಟ ಹಾಗೂ ನೈತಿಕ ಮೌಲ್ಯಗಳ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳು ಮೋಬೈಲ್‌ನಿಂದ ಅಂತರ ಕಾಯ್ದು ಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಮುಖ್ಯಶಿಕ್ಷಕ ಬಸನಗೌಡ ಅಣ್ಣಿಗೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಮೊದಲು ಗುರುವಾದರೆ ಪೋಷಕರು 2ನೇ ಗುರುವಾಗಿ ಅವರನ್ನು ತಿದ್ದುವ ಕೆಲಸ ಮಾಡಿದಾಗ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ವೇಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಕ್ಷ್ಮಿ ಎಲ್ ಕಳ್ಳಿಗುದ್ದಿ ಅಧ್ಯಕ್ಷತೆ ವಹಿಸಿದ್ದರು, ಯರಗಟ್ಟಿ ಜಿಪಂ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಸವದತ್ತಿ ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಶಿವು ನಂದಗಾನ, ವಸುದಾ ದೇಸಾಯಿ, ಕಮಲಾಕ್ಷಿದೇವಿ ದೇಸಾಯಿ, ಸುಶಿಲಾ ಕಳ್ಳಿಗುದ್ದಿ, ಕಾಂತು ಕಳ್ಳಿಗುದ್ದಿ, ಶಿಕ್ಷಕಿ ಸವಿತಾ ದೆವರೆಡ್ಡಿ, ಲಕ್ಷ್ಮಿ ಗುನಕಿ, ಕಮಲಾ ಕಳಗಿಮಠ, ಪ್ರೀಯಾಂಕಾ ರಾಯರ, ರುದ್ರಪ್ಪ ಗಸ್ತಿ, ಕೃಷ್ಣಾಜಿ ಇಂಗಳೆ, ರೂಪಾ ಕತ್ತಿ, ಶಿಲ್ಪಾ ಪತ್ತಾರ, ಶ್ರದ್ಧಾ ಬಾಳಿ, ನಿಲೋಪರ್ ತೊಟಗಿ, ಸುಮೇಶಾಲ, ಅಡ್ಲಿನ್ ಲಿಯೋನಡಾದ, ಈರಮ್ಮ ಬಾಳಿಕಾಯಿ, ಸಕ್ಕೂಬಾಯಿ ದಾಸರ ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು.