ಪರೀಕ್ಷಾ ಕೇಂದ್ರಗಳಿಗೆ ಡಿಸಿ ಜಾನಕಿ ಭೇಟಿ

| Published : Mar 26 2024, 01:18 AM IST

ಸಾರಾಂಶ

ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾದ ಒಟ್ಟು 31496 ವಿದ್ಯಾರ್ಥಿಗಳ ಪೈಕಿ 31255 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 241 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಾದ್ಯಂತ ಸೋಮವಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನವನಗರದ ಅಂಜುಮನ್ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆ ಸುಸೂತ್ರವಾಗಿ ನಡೆದಿರುವ ಬಗ್ಗೆ ಹಾಗೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಂದ ಪಡೆದರು.

ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾದ ಒಟ್ಟು 31496 ವಿದ್ಯಾರ್ಥಿಗಳ ಪೈಕಿ 31255 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 241 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬಾದಾಮಿ ತಾಲೂಕಿನಲ್ಲಿ ಪರೀಕ್ಷೆಗೆ ನೋಂದಣಿಯಾದ 5286 ಪೈಕಿ 5312 ವಿದ್ಯಾರ್ಥಿಗಳು ಹಾಜರಾಗಿ 30 ಜನ ಗೈರು ಹಾಜರಾಗಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ ನೋಂದಾಯಿಸಿದ 4720 ಪೈಕಿ 4684 ಜನ ಹಾಜರಿದ್ದು, 36 ಜನ ಗೈರು ಹಾಜರಾಗಿದ್ದಾರೆ.

ಬೀಳಗಿ ತಾಲೂಕಿನಲ್ಲಿ ನೋಂದಣಿಯಾದ 2865 ವಿದ್ಯಾರ್ಥಿಗಳ ಪೈಕಿ 2845 ಜನ ಹಾಜರಾಗಿ 20 ಜನ ಗೈರು ಹಾಜರಾಗಿದ್ದಾರೆ. ಹುನಗುಂದ ತಾಲೂಕಿನಲ್ಲಿ 5170 ಪೈಕಿ 5135 ಜನ ಹಾಜರಾಗಿ 35 ಜನ ಗೈರು ಹಾಜರಾಗಿದ್ದಾರೆ. ಜಮಖಂಡಿ ತಾಲೂಕಿನಲ್ಲಿ 8121 ಪೈಕಿ 8054 ಜನ ಗೈರು ಹಾಜರಾಗಿ 67 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮುಧೋಳ ತಾಲೂಕಿನಲ್ಲಿ 5278 ವಿದ್ಯಾರ್ಥಿಗಳ ಪೈಕಿ 5225 ಹಾಜರಾಗಿ 53 ಜನ ಗೈರು ಹಾಜರಾಗಿರುತ್ತಾರೆ. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿರುವದಿಲ್ಲವೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.