ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

| Published : Apr 22 2024, 02:16 AM IST

ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕವಾಗಿಯೇ 9 ಸಲ ಇರಿದು ಬರ್ಬರ ಹತ್ಯೆ ಮಾಡಿ ಮತಾಂಧ ಫಯಾಜ್‌ ಲವ್‌ ಹೆಸರಿನಲ್ಲಿ ಜಿಹಾದ್‌ ಕೃತ್ಯ ಎಸಗಿದ್ದಾನೆ. ಇಂತಹ ಕೃತ್ಯ ಮತ್ತೆ ಮರುಕಳಿಸದಂತೆ ತಕ್ಷಣವೇ ನ್ಯಾಯಾಲಯ ಶಿಕ್ಷೆ ವಿಧಿಸಬೇಕೆಂದು ಗುರುಪಾದ ಕುಳಲಿ ಸೇರಿದಂತೆ ಹಲವಾರು ಹಿಂದೂ ಪರ ಮುಖಂಡರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಹುಬ್ಬಳ್ಳಿಯ ನೇಹಾ ಹಿರೇಮಠ ಬರ್ಬರ ಹತ್ಯೆಗೈದ ಘಟನೆಯನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು. ಕೊಲೆ ಆರೋಪಿ ಫಯಾಜ್‌ನನ್ನು ಶೀಘ್ರ ವಿಚಾರಣೆ ನಡೆಸಿ ತ್ವರಿತ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಮುಧೋಳದ ಹಿಂದೂ ಜಾಗರಣ ವೇದಿಕೆ ಹಾಗೂ ಅನೇಕ ಹಿಂದೂಪರ ಸಂಘಟನೆಗಳು ಶನಿವಾರದಂದು ರನ್ನ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಲವ್‌-ಜಿಹಾದ್‌ಗೆ ಮತ್ತೊಬ್ಬ ಹಿಂದು ಯುವತಿ ಬಲಿಯಾಗಿದ್ದಾಳೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರೀತಿಸಲು ನಿರಾಕರಿಸಿದ ನೇಹಾ ಹಿರೇಮಠಳನ್ನು ಹಾಡಹಗಲೇ, ಸಾರ್ವಜನಿಕವಾಗಿಯೇ 9 ಸಲ ಇರಿದು ಬರ್ಬರ ಹತ್ಯೆ ಮಾಡಿ ಮತಾಂಧ ಫಯಾಜ್‌ ಲವ್‌ ಹೆಸರಿನಲ್ಲಿ ಜಿಹಾದ್‌ ಕೃತ್ಯ ಎಸಗಿದ್ದಾನೆ. ಇಂತಹ ಕೃತ್ಯ ಮತ್ತೆ ಮರುಕಳಿಸದಂತೆ ತಕ್ಷಣವೇ ನ್ಯಾಯಾಲಯ ಶಿಕ್ಷೆ ವಿಧಿಸಬೇಕೆಂದು ಗುರುಪಾದ ಕುಳಲಿ ಸೇರಿದಂತೆ ಹಲವಾರು ಹಿಂದೂ ಪರ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತ ಪ್ರಮುಖರಾದ ವೆಂಕಣ್ಣ ಕಳ್ಳಿಗುದ್ದಿ, ಶಂಕರ ಯಡಹಳ್ಳಿ, ಗುರುಪಾದ ಕುಳಲಿ, ಕೃಷ್ಣಾ ಸುಲಾಖೆ, ಪುಂಡಲೀಕ ಮೋಹಿತೆ, ಬಸು ಮಾನೆ, ಕಲ್ಮೇಶ್ ಗೋಸಾರ, ಕರಬಸಯ್ಯ ಹಿರೇಮಠ, ಸೋನಾಪೆ ಕುಲಕರ್ಣಿ, ಮೋಹನ್ ರಿಸ್ಪೋಡ್, ಪ್ರಕಾಶ್ ರಾಮತೀರ್ಥ , ಶಿವರಾಜ ನ್ಯಾಮನ್ನವರ, ಮಹಾದೇವ ಲದ್ದಿ, ಗುರುಪಾದ ಕುಳಲಿ, ರಾಜು ಟಂಕಸಾಲಿ, ಹಾಗೂ ಹಿಂದುಪರ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು ಇದ್ದರು.