ಸಾರಾಂಶ
ಚಿಕ್ಕಬಳ್ಳಾಪುರ : ಹೆಚ್.ಡಿ. ದೇವೇಗೌಡರು ಪ್ರಧಾನಿಯಾದ ಪ್ರಥಮ ಕನ್ನಡಿಗ. ‘ಮಣ್ಣಿನ ಮಗ'''' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ 92 ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇಗುಲದ ಮುಂಭಾಗದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಕೇಕ್ ಕತ್ತರಿಸಿ ಮಾಜಿ ಪ್ರಧಾನಿಯ ಹುಟ್ಟು ಹಬ್ಬ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ 14ನೇ ಮುಖ್ಯಮಂತ್ರಿ
1962 ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಚ್‌ಡಿ ದೇವೇಗೌಡರು ಕಾಂಗ್ರೆಸ್ ವಿಭಜನೆಗೊಂಡ ಬಳಿಕ ಸಂಸ್ಥಾ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅಲ್ಲಿಂದ ವಿರೋಧ ಪಕ್ಷದ ನಾಯಕರಾಗಿ,ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾಗಿ, ಲೋಕಸಭಾ ಸದಸ್ಯರೂ ಆಗಿ ತಮ್ಮ ರಾಜಕೀಯ ಜೀವನದಲ್ಲಿ ಮುಂದುವರಿಸಿದರು. ಬಳಿಕ ಜಾತ್ಯತೀತ ಜನತಾದಳ ಪಕ್ಷವನ್ನು ಕಟ್ಟಿ 1994 ರಲ್ಲಿ ರಾಜ್ಯದ 14 ನೇಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು ಎಂದು ಹೇಳಿದರುಇಂದಿಗೂ ರಾಜಕೀಯದಲ್ಲಿ ಸಕ್ರಿಯ
ತಮ್ಮ ಇಳಿ ವಯಸ್ಸಿನಲ್ಲೂ ರಾಜಕೀಯದಲ್ಲಿ ದೇವೇಗೌಡರು ಸಕ್ರಿಯವಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪಕ್ಷದ ಪ್ರಚಾರ ಕಾರ್ಯ ತಂತ್ರಕಾರಿಕೆಯಲ್ಲೂ ದೇವೇಗೌಡರು ಇಂದಿಗೂ ತೊಡಗಿಸಿಕೊಂಡಿದ್ದಾರೆ. ಪಕ್ಷ ಹಿನ್ನಡೆಯನ್ನು ಅನುಭವಿಸಿದಾಗ ಸ್ವತಃ ತಾವೇ ರಂಗಕ್ಕಿಳಿದು ಪಕ್ಷವನ್ನು ಮತ್ತೆ ಸಂಘಟಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದಾರೆ ಎಂದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ತಾಲೂಕು ಅಧ್ಯಕ್ಷ ಕೆ.ಬಿ.ಮುನಿರಾಜು, ಜೆಡಿಎಸ್ ವಕ್ತಾರ ಮಟಮಪ್ಪ, ಮುಖಂಡರಾದ ಕಿಸಾನ್ ಕೃಷ್ಣಪ್ಪ, ನಾರಾಯಣಗೌಡ, ಕೆ.ಪ್ರಭಾನಾರಾಯಣಗೌಡ, ನಾಗರಾಜ್,ಶ್ರೀಧರ್, ಯಲುವಹಳ್ಳಿ ಸೊಣ್ಣೇಗೌಡ ಮತ್ತಿತರರು ಇದ್ದರು.