ಸಾರಾಂಶ
ಶೇಡೇಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ನಿರ್ದೇಶಕರ ಭೇಟಿ
ಖಾನಾಪುರ: ತಾಲೂಕಿನ ಶೇಡೇಗಾಳಿ ತೋಟಗಾರಿಕೆ ಕ್ಷೇತ್ರಕ್ಕೆ ಗುರುವಾರ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್ ರಮೇಶ ಭೇಟಿ ನೀಡಿದರು. ಇಲಾಖೆಯಿಂದ ಬೆಳೆಸಿರುವ ವಿವಿಧ ಪ್ರಕಾರದ ಹಣ್ಣು ಮತ್ತು ತರಕಾರಿ ಸಸಿಗಳನ್ನು ವೀಕ್ಷಿಸಿದರು ಬಳಿಕ ಮಾತನಾಡಿದ ಅವರು ಇಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಅಂಜೂರ ಬೆಳೆಯುವ ಪ್ರಯೋಗ ಮಾಡಲಾಗಿದೆ. ಇಲಾಖೆಯಿಂದ ಮತ್ತಷ್ಟು ಅಭಿವೃಧ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುದಾನ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಶೇಡೇಗಾಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು. ಈ ವೇಳೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಮತ್ತು ಹಿರಿಯ ಸಹಾಯಕ ನಿರ್ದೇಶಕ ಶಮಂತ್ ಹಾಗೂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.