ಸಾರಾಂಶ
ಮಂತ್ರಾಕ್ಷತೆಯನ್ನು ಪಟ್ಟಣದಲ್ಲಿ ಸೋಮವಾರ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ವಿತರಿಸಿ ಭಕ್ತಿಭಾವ ಮೆರೆದರು ಬೆಳಗ್ಗೆ ಪಟ್ಟಣದ ಶ್ರೀ ಶಾಂತೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಜೈ ಶ್ರೀರಾಮ ಘೋಷಣೆ ಮೊಳಗಿಸಿ, ಶ್ರೀ ರಾಮನ ಭಾವಚಿತ್ರ ಹಾಗೂ ಶ್ರೀ ರಾಮಮಂದಿರ ಕುರಿತು ವಿವರಣೆ ಉಳ್ಳ ಕರಪತ್ರ ಹಂಚಿಕೆ ಮಾಡಿದರು.
ಕನ್ನಡಪ್ರಭ ವಾರ್ತೆ ಇಂಡಿ
ಜ.22 ರಂದು ಅಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಇಡೀ ದೇಶ ಸಂತೋಷ ಪಡುವ ವಿಷಯ. ಯಾವುದೇ ರಾಜಕೀಯ ವಿಷಯ ಬರುವುದಿಲ್ಲ. ಪಕ್ಷಭೇದ ಮರೆತು ಭಾರತೀಯರಾದವರು ಸಂಭ್ರಮಪಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆ ಅಲ್ಲಿಂದ ತಂದಿದ್ದ ಮಂತ್ರಾಕ್ಷತೆಯನ್ನು ಪಟ್ಟಣದಲ್ಲಿ ಸೋಮವಾರ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ವಿತರಿಸಿ ಭಕ್ತಿಭಾವ ಮೆರೆದರು ಬೆಳಗ್ಗೆ ಪಟ್ಟಣದ ಶ್ರೀ ಶಾಂತೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಜೈ ಶ್ರೀರಾಮ ಘೋಷಣೆ ಮೊಳಗಿಸಿ, ಶ್ರೀ ರಾಮನ ಭಾವಚಿತ್ರ ಹಾಗೂ ಶ್ರೀ ರಾಮಮಂದಿರ ಕುರಿತು ವಿವರಣೆ ಉಳ್ಳ ಕರಪತ್ರ ಹಂಚಿಕೆ ಮಾಡಿದರು. ಈ ವೇಳೆ ಅವರು ಮಾತನಾಡಿದರು.
ಬಿಜೆಪಿ ಮುಖಂಡ ಶಾಂತು ಕಂಬಾರ, ದೇವೆಂದ್ರ ಕುಂಬಾರ ಮಾತನಾಡಿ, ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಬಂದಿದೆ. ಕೋಟ್ಯಂತರ ಭಕ್ತರು ಈಗಾಗಲೇ ನಾನಾ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿರುವುವರ ಮನೆ ಬಾಗಿಲಿಗೆ ಪ್ರಸಾದ ತಲುಪಿಸಬೇಕು. ಈ ನಿಟ್ಟಿನಲ್ಲಿ ಟ್ರಸ್ಟನವರು ಪ್ರತಿ ಮನೆಗೂ ರಾಮದೇವರ ಪ್ರಸಾದ ತಲುಪಿಸುವ ಹಿತದೃಷ್ಠಿಯಿಂದ ಪ್ರತಿ ಊರು, ಗ್ರಾಮಕ್ಕೆ ಮಂತ್ರಾಕ್ಷತೆ, ಭಾವಚಿತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.ಜ.22 ರಂದು ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಜಾತಿ, ಧರ್ಮ, ಭೇದ ಇಲ್ಲದೆ ಎಲ್ಲರಿಗೂ ಮಂತ್ರಾಕ್ಷತೆ ವಿತರಿಸುವುದರ ಮೂಲಕ ಆಹ್ವಾನಿಸಲಾಗುವುದು. ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆ ಹಿಂದೂಗಳಿಗೆ ಜ.22 ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದು ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ವೇಳೆ ಸೋಮು ನಿಂಬರಗಿಮಠ, ಸಿದ್ದಲಿಂಗ ಹಂಜಗಿ, ದೇವೆಂದ್ರ ಕುಂಬಾರ, ಶಾಂತು ಕಂಬಾರ, ಪ್ರಕಾಶ ಬಿರಾದಾರ, ಮಲ್ಲು ಬಿರಾದಾರ, ಶ್ರೀಧರ ಕ್ಷತ್ರಿ, ಶಂಕರ ಹಲವಾಯಿ, ಮಂಜು ದೇವರ, ವಜ್ರಕಾಂತ ಕುಡಿಗನೂರ, ಅಶೋಕ ಅಕಲಾದಿ, ಅಮಸಿದ್ದ ಕುಂಬಾರ, ಸತೀಶ ಕುಂಬಾರ, ಸಂಜು ರಾಠೋಡ, ಸಂತೋಷ ಗವಳಿ, ಮಲ್ಲು ವಾಲಿಕಾರ ಮೊದಲಾದವರು ಇದ್ದರು.