ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ಅಯೋಧ್ಯೆ ಮಂತ್ರಾಕ್ಷತೆ ಪ್ರತಿ ಮನೆಗೆ ತಲುಪಿಸುವ ಪುಣ್ಯ ಕಾರ್ಯಕ್ಕೆ ಜ.6 ರಂದು ಮೂರು ಸಾವಿರಮಠದಿಂದ ಚಾಲನೆ ನೀಡಲಾಗುವುದು. ಈ ಪುಣ್ಯ ಕಾರ್ಯಕ್ಕೆ ನಾಡಿನ ಎಲ್ಲ ಪೂಜ್ಯರನ್ನು ಆಹ್ವಾನಿಸಲಾಗಿದ್ದು, ರುದ್ರ ಹೋಮ, ಪೂರ್ಣಾಹುತಿ ನೆರವೇರಿಸಲಾಗುವುದು ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು
ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ವಿಶ್ವ ಹಿಂದು ಪರಿಷದ್, ಬಜರಗಂದಳ ತಾಲೂಕು ಘಟಕದಿಂದ ನಡೆದ ಪೂರ್ವಭಾವಿ ಸಭೆ ಮಾತನಾಡಿದ ಅವರು, ಪ್ರಭು ಶ್ರೀರಾಮನ ಸನ್ನಿಧಿಯಿಂದ ಪೂಜಿಸಲ್ಪಟ್ಟ ಅಯೋಧ್ಯೆ ಮಂತ್ರಾಕ್ಷತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಪ್ರತಿ ಮನೆಗೆ ತಲುಪಿಸಬೇಕು. ಇದು ಪುಣ್ಯ ಕೆಲಸ. ನಮ್ಮ ಕಾಲದಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಇತಿಹಾಸ. ನಮ್ಮ ಧರ್ಮದ ಶಕ್ತಿ ಎಲ್ಲರೂ ತೋರಿಸಬೇಕು. ಪ್ರಧಾನಿ ಕರೆಗೆ ಎಲ್ಲರೂ ಸ್ಪಂದಿಸಬೇಕು. ಎಲ್ಲರೂ ಕೈ ಜೋಡಿಸಿ ಈ ಕಾರ್ಯ ಯಶಸ್ಸಿಗೊಳಿಸಬೇಕು ಎಂದು ಹೇಳಿದರು.ವಿಶ್ವ ಹಿಂದು ಪರಿಷದ್ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ, ತಾಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ ಮಾತನಾಡಿ, ಮೊದಲಿಗೆ ಪುರಸಭೆ 27 ವಾರ್ಡುಗಳಲ್ಲಿ ವಿತರಣೆ ಕಾರ್ಯ ಆರಂಭಿಸಿ, ನಂತರ ಗ್ರಾಮೀಣ ಮಟ್ಟದಲ್ಲಿ ಅಕ್ಷತೆ ತಲುಪಿಸಲಾಗುವುದು ಎಂದರು.ಮುಖಂಡ ಶಿವಾನಂದ ಬಡ್ಡಿಮನಿ, ಗೌತಮ ಇಂಚಲ, ವಿವೇಕಾನಂದ ಪೂಜೇರ, ಗುರು ಮೆಟಗುಡ್ಡ, ಪ್ರಫುಲ್ ಪಾಟೀಲ, ವಿಜಯ ಪತ್ತಾರ, ಎಂ.ವಿ.ಸಾಲಿಮಠ, ಸಂಗಮೇಶ ಸವದತ್ತಿಮಠ, ಸಚಿನ್ ಚೀಲದ, ಪ್ರಶಾಂತ ಅಮ್ಮನಿಭಾವಿ, ಗಿರೀಶ ಹರಕುಣಿ, ಬಸವರಾಜ ಶಿಂತ್ರಿ, ಸಾಗರ ಭಾವಿಮನಿ, ಮಲ್ಲಿಕಾರ್ಜುನ ವಕ್ಕುಂದಮಠ, ಆದರ್ಶ ಗುಂಡಗವಿ, ಸುಭಾಸ ತುರಮರಿ, ಬಸವರಾಜ ದೊಡಮನಿ, ಸಚಿನ ಖಡಿ, ಮಧು ಬುಲಬುಲೇ, ಸಂತೋಷ ಹಡಪದ ಸೇರಿ ಅನೇಕರು ಇದ್ದರು. ಮಲ್ಲೂ ಬೆಳಗಾವಿ ಶಾಂತಿ ಮಂತ್ರ ಪಠಿಸಿದರು.
--ಫೊಟೋ : ಬೈಲಹೊಂಗಲ ಮೂರುಸಾವಿರಮಠದಲ್ಲಿ ಅಯೋಧ್ಯಾ ಮಂತ್ರಾಕ್ಷತೆ ವಿತರಣೆ ಕುರಿತು ನಡೆದ ಸಭೆಯಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿದರು.