ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ದೀಪಾವಳಿ ಸಂಭ್ರಮ

| Published : Nov 04 2024, 12:35 AM IST / Updated: Nov 04 2024, 12:36 AM IST

ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ದೀಪಾವಳಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಬ್ಬ ಆಚರಣೆಯ ಹಿನ್ನೆಲೆಯನ್ನು ಪರಿಚಯಿಸಲಾಯಿತು. ಪೋಷಕರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಬ್ಬದ ಆಚರಣೆಯು ಸಂತೋಷ ಪಸರಿಸುವ ವೇದಿಕೆ. . ಎಲ್ಲಾ ಹಬ್ಬಗಳ ಹಿನ್ನೆಲೆಯನ್ನು ತಿಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಶಾಲೆಯ ಅಧ್ಯಕ್ಷರಾದ ಅನಂತ ಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಬ್ಬ ಆಚರಣೆಯ ಹಿನ್ನೆಲೆಯನ್ನು ಪರಿಚಯಿಸಲಾಯಿತು. ಪೋಷಕರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ್ದ ಶಾಲೆಯ ಅಧ್ಯಕ್ಷರಾದ ಅನಂತ ಕುಮಾರ್‌ ಮಾತನಾಡಿ, ಹಬ್ಬದ ಆಚರಣೆಯು ಸಂತೋಷ ಪಸರಿಸುವ ವೇದಿಕೆ. ಹಬ್ಬಗಳನ್ನು ನಾವು ಮಕ್ಕಳೊಂದಿಗೆ ಖುಷಿಯಿಂದ ಆಚರಿಸುವುದು ಅಷ್ಟೇ ಅಲ್ಲದೆ ಮಕ್ಕಳಿಗೆ ಹಬ್ಬದ ಹಿನ್ನೆಲೆಯನ್ನು ತಿಳಿಸಬೇಕು ಆಗ ಸಂಸ್ಕೃತಿಯ ವರ್ಗಾವಣೆ ಪರಿಪೂರ್ಣವಾಗುತ್ತದೆ. ಎಲ್ಲಾ ಹಬ್ಬಗಳ ಹಿನ್ನೆಲೆಯನ್ನು ತಿಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ದೀಪಾವಳಿ ಹಬ್ಬದ ಹಿನ್ನೆಲೆಯನ್ನು ತಿಳಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರಾಂಶುಪಾಲ ಡಾ. ಸುರೇಶ್ ಕುಮಾರ್‌ ಕುಂದೂರ್‌ ಮಾತನಾಡಿ, ಈ ರೀತಿಯ ಆಚರಣೆಗಳಿಂದ ಒಂದೆಡೆ ಸಂಪ್ರದಾಯದ ಪರಿಚಯವಾದರೆ ಮತ್ತೊಂದೆಡೆ ಸಂಬಂಧಗಳನ್ನು ಗಟ್ಟಿಗೊಳಿಸಲು ಇವು ಅನುವು ಮಾಡಿಕೊಡುತ್ತವೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತ ಮನೋರಂಜನಾ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶ ನಮ್ಮದಾಗಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಅಷ್ಟೇ ಅಲ್ಲದೆ ಪೋಷಕರ ಪ್ರತಿಭೆಗೂ ವೇದಿಕೆ ಒದಗಿಸಿಕೊಟ್ಟಿದ್ದು, ಅದರ ಸದ್ಭಳಕೆಯನ್ನು ಪೋಷಕರು ಮಾಡಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಅಭಿಪ್ರಾಯ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ನೃತ್ಯ ಕಾರ್ಯಕ್ರಮಗಳ ಮೂಲಕ ಮನರಂಜಿಸಿದರು. ಮಹಿಳಾ ಪೋಷಕರು ದೀಪಹಚ್ಚಿ ಸಂಭ್ರಮಿಸಿದರು, ಮಕ್ಕಳು ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಹಬ್ಬದ ಆಚರಣೆ ಮಾಡಿದರು.